ಕೊಳ್ಳೇಗಾಲ: ಕೊಳ್ಳೇಗಾಲ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಕೊಳ್ಳೇಗಾಲದ ಹಿರಿಯ ಲೆಕ್ಕ ಪರಿಶೋಧಕರು ಹಾಗೂ ತೆರಿಗೆ ಸಲಹೆಗಾರ ರಾದ ಬಿ.ಎಂ.ಪುಟ್ಟಮಾದಪ್ಪ ಅವರು ಅಯ್ಕೆಯಾಗಿದ್ದು ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವು ಇದೇ ಜೂನ್ ತಿಂಗಳು 28 ರಂದು ಕೊಳ್ಳೇಗಾಲದಲ್ಲಿ ಜರುಗಲಿದೆ.
ಕೊಳ್ಳೇಗಾಲ ಪಟ್ಟಣದ ಲಯನ್ಸ್ ಸಮುದಾಯ ಭವನದಲ್ಲಿ ಜೂನ್ 28 ರ ಸಾಯಂಕಾಲ 6 ಗಂಟೆಗೆ ಪದಗ್ರಹಣ ಸಮಾರಂಭ ಆಯೋಜಿಸಲಾಗಿದ್ದು ಲಯನ್ಸ್ ಕ್ಲಬ್ಬಿನ ಎರಡನೇ ಉಪ ಜಿಲ್ಲಾ ಗರ್ವನರ್ ಎಂ.ಸಿದ್ದೇಗೌಡ ಸಮ್ಮುಖದಲ್ಲಿ ನಿರ್ಗಮಿತ ಅಧ್ಯಕ್ಷರಾದ ಪಿ.ಸುರೇಶ್ ಅವರಿಂದ ಪದವಿ ಸ್ವೀಕರಿಸಲಿದ್ದಾರೆ.
ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಉಪಾಧ್ಯಕ್ಷರಾಗಿ ಜಿ.ಮಹೇಂದ್ರ, ಎನ್.ನವನೀತ್ ಗೌಡ, ಕಾರ್ಯದರ್ಶಿಯಾಗಿ ಎಸ್.ನಾಗರಾಜು, ಜಂಟಿ ಕಾರ್ಯದರ್ಶಿ ಯಾಗಿ ಜೆ.ಹರ್ಷ, ಖಜಾಂಜಿಯಾಗಿ ಬಿ.ಎನ್.ವಿರೂಪಾಕ್ಷ ಸ್ವಾಮಿ, ಆಡಳಿತಾಧಿಕಾರಿಯಾಗಿ ಎಂ.ಮಹದೇವಸ್ವಾಮಿ ಪದಗ್ರಹಣ ಮಾಡಲಿದ್ದಾರೆ.
ವರದಿ- ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.