ಕೊಳ್ಳೇಗಾಲ. ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿ ಹಾಗೂ ರೈತ ಸಂಘ, ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ವಿರೋಧಿ ಎಸ್.ಐ.ಆರ್ ನೀತಿಯನ್ನು ರದ್ದುಪಡಿಸಿ  ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಮತಕಳ್ಳ ಜ್ಞಾನೇಶ್ ಕುಮಾರ್ ಗುಪ್ತ ನ್ನು ವಜಾ ಗೊಳಿಸಿ ಹಾಗೂ ದೆಹಲಿಯಲ್ಲಿ ಹೋರಾಟಗಾರರ ಮೇಲೆ ನಡೆಯುತ್ತಿರುವ ಕೇಂದ್ರ ಸರ್ಕಾರದ ನಕಲಿ ಪೊಲೀಸರ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನಾ ಧರಣಿ ನಡೆಸಿದರು.

ಪಟ್ಟಣದ ಅಂಬೇಡ್ಕರ್ ಪ್ರತಿಮೆ ಬಳಿ ಜಿ.ಪಂ ಮಾಜಿ ಸದಸ್ಯರು ಮುಳ್ಳೂರು ಕಮಲ್ ನೇತೃತ್ವದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಅಧಿಕಾರಿ ಧಿಕ್ಕಾರ ಕೂಗುವ ಮೂಲಕ ಪ್ರತಿಭಟಿಸಿದರು.
ಕಠಿಣ ಕಾನೂನು ಜಾರಿಗೊಳಿಸಬೇಕೆಂದು ಕೋರಿ.

ಭಾರತ ಚುನಾವಣಾ ಆಯೋಗವು ನಡೆಸುತ್ತಿರುವ ಈ ಕೂಟಲೇ ಎಸ್.ಐ.ಆರ್. ಕಾನೂನು ಬಾಹಿರ ಮತ್ತು ಸಂವಿಧಾನ ವಿರೋಧಿ ಕೃತ್ಯವಾಗಿರುವುದರಿಂ ಎಸ್.ಐ.ಆರ್. ಅನ್ನು ರದ್ದುಗೊಳಿಸಬೇಕು. ಹಾಗೂ ಚುನಾವಣಾ ಆಯೋಗ ಸ್ವಯತ್ತ ಸಂಸ್ಥೆಯಾಗಿ ಸಂವಿಧಾನದ ಆಶಯಗಳನ್ನು ಈಡೇರಿಸುವ ಬದಲು ಸಂವಿಧಾನ ವಿರೋಧಿ ನಿಯಮಗಳನ್ನು ಎಸ್.ಐ.ಆರ್. ನಲ್ಲಿ ಅಳವಡಿಸಿಕೊಂಡು ಬಿ.ಜೆ.ಪಿ. ಸರ್ಕಾರವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಎಸ್.ಸಿ./ಎಸ್.ಸಿ. ಮತ್ತು ಅಲ್ಪ ಸಂಖ್ಯಾತರನ್ನು ಗುರಿಮಾಡಿಕೊಂಡು ಅವರ ಮತದಾನದ ಹಕ್ಕನ್ನು ಕಸಿಯಲು ಹೊರಟಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕೃತ್ಯವಾಗಿರುತ್ತದೆ. ಮತ್ತು ನಿರ್ಧಿಷ್ಟ ಜನರ ಮತದಾನದ ಹಕ್ಕನ್ನು ಕಸಿಯುವುದರಿಂದ ಸಾಮೂಹಿಕ ನರಹತ್ಯೆ ಆಗಿರುತ್ತದೆ. ಆದ್ದರಿಂದ ಈ ಕೂಡಲೆ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರವರನ್ನು ತಕ್ಷಣ ವಜಾ ಮಾಡಿ ಮೇಲ್ಕಂಡ ಘೋರ ಕೃತ್ಯಗಳ ವಿರುದ್ಧ ಕೇಸು ದಾಖಲಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಳ್ಳೂರು ಕಮಲ್, ಹೋರಾಟಗಾರರು ಮುಳ್ಳೂರು ಶಿವಮಲ್ಲು, ಮಹಮ್ಮದ್ ಮತೀನ್, ಭಾರತೀಯ ಬೌದ್ಧ ಮಹಾಸಭೆ ಗೌರವಧ್ಯಕ್ಷರು ರಾಚಪ್ಪಾಜಿ, ಶಂಭುಲಿಂಗಶೆಟ್ಟಿ, ನಟರಾಜು ಮಾಳಿಗೆ, ಇನಾಯತ್ ಪಾಷ, ಹೇಮಂತ್ ನಾಯಕ, ರೈತ ಸಂಘ ಶಿವಮೂರ್ತಿ ನಾಯಕ, ಯರಿಯೂರು ಶ್ರೀನಿವಾಸ್, ಎಲ್.ಐ.ಸಿ ರಾಮಣ್ಣ, ವಡಗೆರೆ ಮಹದೇವ, ಸಿಲ್ಕ್ ರಾಮಣ್ಣ, ನಾಗರಾಜು, ಸಿದ್ದಾರ್ಥ್, ನಿವೃತ್ತ ತಹಶಿಲ್ದಾರ್ ಮಹದೇವಯ್ಯ, ಬಸವಣ್ಣ ಸೇರಿದಂತೆ ಅನೇಕರು ಹಾಜರಿದ್ದರು.
ವರದಿ ನಿಂಪು ರಾಜೇಶ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.