
ಕೊಳ್ಳೇಗಾಲ. ಸತ್ತೇಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು.
ಗ್ರಾಮದಲ್ಲಿ ನಡೆದ ಚುನಾವಣೆಯಲ್ಲಿ 8 ಮಂದಿ ನಿರ್ದೇಶಕರು ಅಮೋಘವಾಗಿ ಜಯಗಳಿಸಿದ್ದಾರೆ. ಅವಿರೋಧವಾಗಿ 3 ನಿರ್ದೇಶಕರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗೇಶ್ ಅವರು ಘೋಷಣೆ ಮಾಡಿದರು.
ಈ ಪೈಕಿ ಇಂದು ನಡೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದವರ ಪೈಕಿ ಸಾಲಗಾರರ ಕ್ಷೇತ್ರದ ಸಾಮಾನ್ಯ ಸ್ಥಾನದಲ್ಲಿ ಆರ್.ನವೀನ್ ಕುಮಾರ್ (128), ಭಾಸ್ಕರ (122), ಎಂ.ಮಲ್ಲೇಶ (116), ಮಲ್ಲಿಕಾರ್ಜುನ (114), ಎಂ.ಶಂಕರೇಗೌಡ (114) ಜಯಗಳಿಸಿದ್ದಾರೆ.
ಇವರ ವಿರುದ್ಧ ಸ್ಪರ್ಧಿಸಿದ್ದ ಪಿ.ಲೋಕೇಶ್ (109)
ಶಿವಕುಮಾರ್(114) ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು.
ಮಹಿಳಾ ಮೀಸಲು ಸ್ಥಾನದಿಂದ ದೊಡ್ಡಮ್ಮ(118), ಮಂಜುಳ.ಎಸ್(102) ಗೆಲುವು ಸಾಧಿಸಿದ್ದಾರೆ.
ಇವರ ವಿರುದ್ಧ ಸ್ಪರ್ಧಿಸಿದ್ದ ಸರೋಜಮ್ಮ (67) ಮತ ಪಡೆದು ಸೋಲು ಅನುಭವಿಸಿದ್ದರು.
ಸಾಲಗಾರರಲ್ಲದ ಕ್ಷೇತ್ರದಿಂದ ಸೋಮಶೇಖರ್.ಜಿ (208) ಮತ ಪಡೆದು ಜಯಗಳಿಸಿದರು. ಇವರ ವಿರುದ್ಧ ಸ್ಪರ್ಧಿ ಗಳಾದ ಜಯರಾಜು(161) ಹಾಗೂ ಪ್ರಕಾಶ(5) ಮತಗಳನ್ನು ಪಡೆಯುವ ಮೂಲಕ ಸೋಲು ಅನುಭವಿಸಿದರು.
ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಸ್ಪರ್ಧಿಸಿದ್ದ ಜಿ.ಶಾಂತರಾಜು(115) ಗೆಲವು ಗಳಿಸಿದ್ದಾರೆ. ಇವರ ವಿರುದ್ಧ ಸ್ಪರ್ಧಿ ಮಹದೇವಯ್ಯ (114) ಮತಗಳ ಪಡೆದು ಸೋಲು ಅನುಭವಿಸಿದರು.
ಬಿಸಿಎಂ ‘ಎ’ ಕ್ಷೇತ್ರದಿಂದ ಕಾಂತು, ಬಿಸಿಎಂ ‘ಬಿ’ ಕ್ಷೇತ್ರದಿಂದ ರಾಜುಗೋಪಾಲ್ ಹಾಗೂ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಚಲುವನಾಯಕ ಅವಿರೋಧವಾಗಿ ಆಯ್ಕೆಯಾದವರು.
ಲಾಟರಿ ಮೂಲಕ ಇಬ್ಬರ ಗೆಲುವು: ಸಾಲಗಾರರ ಕ್ಷೇತ್ರದ ಸಾಮಾನ್ಯ ಸ್ಥಾನದಲ್ಲಿ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ, ಎಂ.ಶಂಕರೇಗೌಡ ಹಾಗೂ ಶಿವಕುಮಾರ್ ಮೂವರಿಗೆ 114 ಮತಗಳು ಬಂದಿದ್ದವು. ಅದರಲ್ಲಿ ಇಬ್ಬರಿಗೆ ಮಾತ್ರ ಗೆಲುವಿಗೆ ಅವಕಾಶ ಇದ್ದುದರಿಂದ ಲಾಟರಿ ಮೂಲಕ ಮಲ್ಲಿಕಾರ್ಜುನ ಹಾಗೂ ಶಂಕರೇಗೌಡ ರವರು ಗೆಲುವು ಸಾಧಿಸಿದ್ದಾರೆ.
ಈ ವೇಳೆ ಸ್ಪರ್ಧೆ ಮಾಡಿ ಜಯಗಳಿಸಿದ್ದ ಎಲ್ಲಾ ನೂತನ ನಿರ್ದೇಶಕರುಗಳಿಗೆ ಹಾರ ಹಾಕಿ ಸನ್ಮಾನಿಸಿ, ಪ್ರಮಾಣ ಪತ್ರವನ್ನು ಚುನಾವಣಾಧಿಕಾರಿ ನಾಗೇಶ್ ನೀಡಿದರು. ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಂಗಾಂಬಿಕಾ ಹಾಗೂ ಗ್ರಾಮದ ಮುಖಂಡರು ಇದ್ದರು.
ವರದಿ: ನಿಂಪು ಸುರೇಶ್
![/* Change button hover color to red */
button:hover,
.wp-block-button__link:hover,
input[type="submit"]:hover {
background-color: red !important;
color: #fff !important; /* Makes text white for contrast */
}](https://rapower28.com/wp-content/uploads/2025/08/WhatsApp-Image-2025-08-23-at-7.28.55-AM-2-1024x454.jpeg)













