
ಕೊಳ್ಳೇಗಾಲ. ತಾಲ್ಲೂಕಿನ ಜಕ್ಕಳ್ಳಿ ಗ್ರಾಮದಲ್ಲಿ ರೈತ ಸಂಘದ ಗ್ರಾಮಶಾಖೆಯನ್ನು ಉದ್ಘಾಟನೆಗೊಳಿಸಿ, ನೂತನವಾಗಿ 30 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು.
ಬಳಿಕ ರೈತ ಮುಖಂಡ ಶೈಲೇಂದ್ರ ಮಾತನಾಡಿ, ಕರ್ನಾಟಕ ರಾಜ್ಯ ರೈತ ಸಂಘ ಕರ್ನಾಟಕದಲ್ಲಿ ಸ್ಥಾಪನೆಯಾದ ನಂತರ ಅನೇಕ ರೈತ ಪರ ಹೋರಾಟಗಳನ್ನು ರಸ್ತೆಯಲ್ಲಿ ಮಾಡುವುದರ ಮೂಲಕ ಯೋಜನೆಯಾಗಿ ರೂಪುಗೊಳ್ಳುವು ದರಲ್ಲಿ ಸಂಘಟನೆ ತುಂಬಾ ಹೋರಾಟಗಳನ್ನು ಮಾಡಿದೆ. ಅದ್ದರಿಂದ ರೈತರು ಯಾವುದೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾದರೆ ಪ್ರತಿಭಟನೆಯ ಮೂಲಕ ಪಡೆಯಬೇಕಾದಪರಿಸ್ಥಿತಿ ಬಂದಿದೆ ಎಂದು ತಿಳಿಸಿದರು.
ಜಕ್ಕಳ್ಳಿ ಗ್ರಾಮಶಾಖೆಯ ಗೌರವಾಧ್ಯಕ್ಷರಾಗಿ ಮದಲೈಮುತ್ತು, ಅಧ್ಯಕ್ಷರಾಗಿ ಲಾರೆನ್ಸ್ ಕುಟ್ಟಿ, ಉಪಾಧ್ಯಕ್ಷರಾಗಿ ನಾಗರಾಜು, ಪ್ರಧಾನ ಕಾರ್ಯದರ್ಶಿಯಾಗಿ ಸಾಲೂಮಾನ್, ಖಜಾಂಗಿಯಾಗಿ ವಿನ್ನರಸ ರವರನ್ನು ಆಯ್ಕೆ ಮಾಡಿದರು.
ಈ ಸಂಧರ್ಭದಲ್ಲಿ ರೈತ ಮುಖಂಡರು ಪೆರಿಯಮಾಯಗಂ, ಮದುವನಹಳ್ಳಿ ಬಸವರಾಜು, ಮಹಿಳಾ ಘಟಕದ ಶಶಿಕಲಾ, ಕೀರ್ತಿರಾಜ್, ಬೆಟ್ಟೆಗೌಡ, ವಸಂತ ಕುಮಾರ್,ವಿನೋದ, ಸುರೇಂದ್ರ, ವಾಸು,ನಿಕೋಲಾಸ್, ಡೇವಿಡ್ ಮುರುಗನ್, ಗುಣಶೇಖರ್, ನೀಲಮ್ಮ, ರಾಜು,ರವಿ, ರಂಗಸ್ವಾಮಿ, ಮಣಿ, ನಂದೀಶ್ ಹಾಗೂ ಇತರರು ಇದ್ದರು.
- ನಿಂಪುವಾರ್ತೆ
![/* Change button hover color to red */
button:hover,
.wp-block-button__link:hover,
input[type="submit"]:hover {
background-color: red !important;
color: #fff !important; /* Makes text white for contrast */
}](https://rapower28.com/wp-content/uploads/2025/08/WhatsApp-Image-2025-08-23-at-7.28.55-AM-2-1024x454.jpeg)













