/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಹನೂರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ – ಶಾಸಕ ಎಂ.ಆರ್. ಮಂಜುನಾಥ್
Image

ಹನೂರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ – ಶಾಸಕ ಎಂ.ಆರ್. ಮಂಜುನಾಥ್

ಕ್ಷೇತ್ರದ ಜನತೆಯ ಋಣ ತೀರಿಸಲು ನೀಡಿರುವ ಒಂದು ಅವಕಾಶವನ್ನು ಬಳಸಿಕೊಂಡು ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎಂಆರ್ ಮಂಜುನಾಥ್ ಅಭಿಮತ ವ್ಯಕ್ತಪಡಿಸಿದರು…

ಹನೂರು ತಾಲೂಕಿನ ಮಾಸ್ತಿ ಗೌಡನ ದೊಡ್ಡಿ ಗ್ರಾಮದಲ್ಲಿ ಜನಪರ ಸಾಹಿತ್ಯ ಪರಿಷತ್ತು (ರಿ) ಬೆಂಗಳೂರು ಕನಕ ಜಯಂತಿ ಕನಕ ಮತ್ತು ರಾಯಣ್ಣ ಗ್ರಾಮಾಭಿವೃದ್ಧಿ ಸಂಘ (ರಿ) ಹಾಗೂ ಬೀರೇಶ್ವರ ಸ್ವಾಮಿ ದೇವಸ್ಥಾನ ದತ್ತಿ ಮತ್ತು ಅಭಿವೃದ್ಧಿ ಟ್ರಸ್ಟ್ (ರಿ ) ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ದೀಪ ಬೆಳಗಿಸಿ ನಂತರ ಅವರು ಮಾತನಾಡಿದರು…

ಹನೂರು ಕ್ಷೇತ್ರದ ಉದ್ದಗಲಕ್ಕೂ ಜಲತ್ವ ಸಮಸ್ಯೆಗಳ ಅರಿತು ಅಭಿವೃದ್ಧಿಪಡಿಸಲು ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ ಜನತೆಯ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು..

ಜನಪರ ಸಾಹಿತ್ಯ ರಾಜ್ಯದ್ಯಕ್ಷ ಮಹೇಶ್ ಮಾಸ್ತಿ ಗೌಡನ ದೊಡ್ಡಿ ಗ್ರಾಮದಲ್ಲಿ ಉತ್ತಮ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ ಅವರು ರಾಜ್ಯಾದ್ಯಂತ ಒಳ್ಳೆಯ ಕೆಲಸ ಮಾಡುವ ನಿಟ್ಟಿನಲ್ಲಿ ಸ್ವಗ್ರಾಮದಲ್ಲೂ ಸಹ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಒಳ್ಳೆಯ ಕಾರ್ಯಕ್ರಮ ಕೈಗೆತ್ತಿಕೊಂಡಿದ್ದಾರೆ ಗ್ರಾಮದ ಜನತೆ ಹಾಗೂ ಸುತ್ತಮುತ್ತಲಿನ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಸಹಕಾರ ನೀಡಬೇಕು ಎಂದರು.

ದೇವಾಲಯ ನಿರ್ಮಾಣಕ್ಕೆ 5 ಲಕ್ಷ : ಈಗಾಗಲೇ ಶಾಸಕರ ಅನುದಾನದಲ್ಲಿ ಬೀರೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿಗೆ ಹಣ ನೀಡಲಾಗಿದೆ ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಸಮುದಾಯ ಭವನ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಬದ್ಧರಾಗಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಮಹೇಶ್ ಚಿಕ್ಕಲ್ಲೂರು ಮಾಸ್ತಿ ಗೌಡನ ದೊಡ್ಡಿ 400 ವರ್ಷಗಳ ಇತಿಹಾಸ ಇರುವ ಕುಗ್ರಾಮವಾಗಿರುವುದು ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಗ್ರಾಮದಲ್ಲಿ ಸಂಘ ಅಸ್ತಿತ್ವಕ್ಕೆ ಬಂದಿದೆ ಇಲ್ಲಿನ ಯುವಕರು ಮತ್ತು ಗ್ರಾಮದ ಗುರುಹಿರಿಯರು ಸಹಕಾರದೊಂದಿಗೆ ಅಭಿವೃದ್ಧಿಪಡಿಸಲು ಶಾಸಕರು ಹೆಚ್ಚಿನ ರೀತಿಯಲ್ಲಿ ಕುಗ್ರಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದು ತಿಳಿಸಿದರು

ಕುರುಬರ ಸಂಘದ ರಾಜ್ಯ ಮಹಿಳಾ ಅಧ್ಯಕ್ಷ ಪ್ರಭಾವತಿ ಕೆ ಆರ್ ಮಾತನಾಡಿ : ಕುರುಬ ಹಾಲುಮತ ಸಮಾಜ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಮುಖ್ಯ ವಾಹಿನಿಗೆ ಬರಬೇಕು ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲದಾಯಕವಾಗುವ ನಿಟ್ಟಿನಲ್ಲಿ ಮುಂದಾಗಬೇಕು’ ಮುಖ್ಯಮಂತ್ರಿ ಸಿದ್ದರಾಮಯ್ಯ ದೇವರಾಜ್ ಅರಸು ಅವರ ಆಡಳಿತಕ್ಕಿಂತ ಹೆಚ್ಚಿನ ದಿನಗಳು ಆಡಳಿತ ನಡೆಸಿದ ದಾಖಲೆ ಬರದಿದ್ದಾರೆ ಸಮಾಜದ ಹಾಗೂ ಎಲ್ಲಾ ಸಮುದಾಯದ ನಾಯಕರಾಗಿ ಮುಖ್ಯಮಂತ್ರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಹೀಗಾಗಿ ಸಮಾಜ ಏಳಿಗೆಗಾಗಿ ಸಹ ಉತ್ತಮ ಕೆಲಸಗಳನ್ನು ಹಲವಾರು ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದರು..

ಕಾರ್ಯಕ್ರಮದಲ್ಲಿ : ಕೊಳ್ಳೇಗಾಲ ತಾಲೂಕು ಕುರುಬರ ಸಂಘದ ಅಧ್ಯಕ್ಷ ನಂಜೇಗೌಡ ಅಧ್ಯಕ್ಷತೆ ವಹಿಸಿದ್ದರು ಹಾಗೂ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು ಮಾಜಿ ಅಧ್ಯಕ್ಷರಾದ ಸುಬ್ರಮಣ್ಯ ಕೊಳ್ಳೇಗಾಲ ತಾಲೂಕು ಕುರುಬರ ಸಂಘದ ಖಜಾಂಜಿ ವೆಂಕ್ಟೇ ಗೌಡ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘ ಕೊಳ್ಳೇಗಾಲ ಅಧ್ಯಕ್ಷರು ಬ್ರಹ್ಮ ಲಿಂಗಯ್ಯ ಹನೂರು ತಾಲೂಕು ಕುರುಬರ ಸಂಘದ ಅಧ್ಯಕ್ಷ ಶಿವಪ್ಪ ಹನೂರು ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ ದೇವರಾಜ ನಾಯ್ಡು ಮಾಸ್ತಿ ಗೌಡನ ದೊಡ್ಡಿ ಹಿರಿಯ ಮುಖಂಡ ಮಹದೇವ್ ಗೌಡ ಮತ್ತು ಸುಂದರ್ ಮಲ್ಲೇಗೌಡ ಕೈಲಾಸ್ ಮೂರ್ತಿ ಶಿವಮೂರ್ತಿ ಕೆಂಪರಾಜು ವಿ ಸಿ ಬಸವಣ್ಣ ಕೃಷ್ಣ ಹಾಗೂ ಇನ್ನಿತರ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು…..

  • ನಿಂಪುವಾರ್ತೆ

Releated Posts

ಕೊಳ್ಳೇಗಾಲ: ಪೌರಕಾರ್ಮಿಕರಿಗೆ ಊಟ ಬಡಿಸಿದ ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ಸಮಾಜದಲ್ಲಿ ಕೊಳಕು ಮುಕ್ತ ಪ್ರದೇಶವಾಗಲು ಪೌರಕಾರ್ಮಿಕರು ಮುಖ್ಯ ಕಾರಣವಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಹೇಳಿದರು. ಪಟ್ಟಣದ ಸಿಡಿಎಸ್ ಭವನದಲ್ಲಿ ಬುಧವಾರ ಪೌರ…

ByByN Rajesh Feb 11, 2026

ಕೊಳ್ಳೇಗಾಲ ನಗರಸಭೆ – ಜಿಲ್ಲಾಧಿಕಾರಿ ಶ್ರೀ ರೂಪ ಅವರಿಂದ ಉಳಿತಾಯ ಬಜೆಟ್ ಮಂಡನೆ

ಕೊಳ್ಳೇಗಾಲ ನಗರಸಭೆಯ ೨೦೨೬-೨೭ನೇ ಸಾಲಿನ ಬಜೆಟ್‌ನ ಪಕ್ಷಿ ನೋಟ ಕೊಳ್ಳೇಗಾಲ, ಫೆ, ೧೦- ಕೊಳ್ಳೇಗಾಲ ನಗರಸಭೆಯ ಸಭಾಂಗಣದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ಫೆ.೧೦…

ByByN Rajesh Feb 10, 2026

ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರ ಅಯ್ಕೆ

ಕೊಳ್ಳೇಗಾಲ. ಸತ್ತೇಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಗ್ರಾಮದಲ್ಲಿ ನಡೆದ ಚುನಾವಣೆಯಲ್ಲಿ 8…

ByByN Rajesh Feb 9, 2026

ಕೊಳ್ಳೇಗಾಲ : ಗ್ಯಾರೆಂಟಿ ಯೋಜನೆಗಳಿಂದ ನವ ಕರ್ನಾಟಕ ನಿರ್ಮಾಣ – ಶಾಸಕ ಎ.ಆರ್.ಕೃಷ್ಣಮೂರ್ತಿ

ಸರ್ಕಾರದ ಅಭಿವೃದ್ಧಿ ಯೋಜನೆ, ಕಾರ್ಯಕ್ರಮಗಳು ನವಕರ್ನಾಟಕ ನಿರ್ಮಾಣಕ್ಕೆ ಸಹಕಾರಿ: ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಕೊಳ್ಳೇಗಾಲ. ರಾಜ್ಯಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಅಭಿವೃದ್ಧಿಗಾಗಿ…

ByByN Rajesh Jan 17, 2026

ಬಿಳಿಗಿರಿರಂಗನ ಬೆಟ್ಟ: ಅಗ್ನಿ ದುರಂತದಲ್ಲಿ ಅಂಗಡಿ ಕಳೆದು ಕೊಂಡವರಿಗೆ ಹೊಸದಾಗಿ ಅಂಗಡಿ ನಿರ್ಮಾಣ

ಬೆಂಕಿ ಅನಾಹುತ ನಿರಾಶ್ರಿತರಿಗೆ ಮಳಿಗೆ ನಿರ್ಮಾಣದ ಭರವಸೆ ಶಾಸಕ ಎಆರ್ ಕೃಷ್ಣಮೂರ್ತಿ ಯಳಂದೂರು ಜ. 12ಬಿಳಿಗಿರಿರಂಗನ ಬೆಟ್ಟದ ಬಸ್ ನಿಲ್ದಾಣದ ಬಳಿ ಅಂಗಡಿ ಮಳಿಗೆಗಳಿಗೆ…

ByByN Rajesh Jan 13, 2026

ಕೊಳ್ಳೇಗಾಲದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ

ವರದಿ – ಎನ್. ಸುರೇಶ್ ಕೊಳ್ಳೇಗಾಲ. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಎಸ್ಇಪಿ ಮತ್ತು ಟಿಎಸ್ಪಿ ಯೋಜನೆಯಡಿ 75 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ…

ByByN Rajesh Jan 13, 2026

ಕೊಳ್ಳೇಗಾಲ ತಾಲ್ಲೂಕಿನ ಜಕ್ಕಳ್ಳಿ ಗ್ರಾಮದಲ್ಲಿ ರೈತ ಸಂಘದ ಶಾಖೆ ಉದ್ಘಾಟನೆ

ಕೊಳ್ಳೇಗಾಲ. ತಾಲ್ಲೂಕಿನ ಜಕ್ಕಳ್ಳಿ ಗ್ರಾಮದಲ್ಲಿ ರೈತ ಸಂಘದ ಗ್ರಾಮಶಾಖೆಯನ್ನು ಉದ್ಘಾಟನೆಗೊಳಿಸಿ, ನೂತನವಾಗಿ 30 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು.ಬಳಿಕ ರೈತ ಮುಖಂಡ ಶೈಲೇಂದ್ರ…

ByByN Rajesh Jan 6, 2026

ಕೊಳ್ಳೇಗಾಲ : ಅಗಲಿದ ಛಾಯಾಗ್ರಾಹಕ ಹಬೀಬ್ ಗೆ ಶ್ರದ್ಧಾಂಜಲಿ

ಕೊಳ್ಳೇಗಾಲ. ತಾಲ್ಲೂಕು ಛಾಯಚಿತ್ರಗ್ರಾಹಕರ ಸಂಘದಿಂದ ಇತ್ತೀಚೆಗೆ ಹಿರಿಯ ಛಾಯಾಗ್ರಾಹಕ ಹಬೀಬ್ ಉಲ್ಲಾ ನಿಧನರಾದ ಹಿನ್ನೆಲೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಬೀಬ್…

ByByN Rajesh Jan 3, 2026

ಕೊಳ್ಳೇಗಾಲ: ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಕೊಳ್ಳೇಗಾಲ. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಚಿಕ್ಕಮಾಳಿಗೆ, ಪ್ರಧಾನ ಕಾರ್ಯದರ್ಶಿಯಾಗಿ ಎನ್.ನಟರಾಜು ಹಾಗೂ ಪದಾಧಿಕಾರಿಗಳು ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ…

ByByN Rajesh Dec 24, 2025

Leave a Reply

Your email address will not be published. Required fields are marked *

Scroll to Top