
ಕೊಳ್ಳೇಗಾಲ. ತಾಲ್ಲೂಕು ಛಾಯಚಿತ್ರಗ್ರಾಹಕರ ಸಂಘದಿಂದ ಇತ್ತೀಚೆಗೆ ಹಿರಿಯ ಛಾಯಾಗ್ರಾಹಕ ಹಬೀಬ್ ಉಲ್ಲಾ ನಿಧನರಾದ ಹಿನ್ನೆಲೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಬೀಬ್ ಉಲ್ಲಾ ಭಾವಚಿತ್ರವನ್ನು ಇಟ್ಟು ಪುಷ್ಪ ನಮನ ಸಲ್ಲಿಸಿ, ಕೆಲಕಾಲ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಹಿರಿಯ ಛಾಯಾಗ್ರಾಹಕ ಹಬೀಬ್ ರವರ ಅಗಲಿಕೆ ತುಂಬಾ ನಷ್ಟವಾಗಿದೆ. ಸರಳ ಸಜ್ಜನಿಕೆಯ ವ್ಯಕ್ತಿಯುತ್ವವುಳ್ಳವರಾಗಿದ್ದು. ಅವರ ಕುಟುಂಬಕ್ಕೆ ಅವರ ಅಗಲಿಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಈ ಶ್ರದ್ಧಾಂಜಲಿಯಲ್ಲಿ ಛಾಯಚಿತ್ರಗ್ರಾಹಕರ ಸಂಘದ ಅಧ್ಯಕ್ಷರು ಜಯಪ್ರಕಾಶ್, ಉಪಾಧ್ಯಕ್ಷರು ಸರದಾರ್ ಪಾಷ, ಖಜಾಂಚಿ ಪ್ರಸಾದ್, ಪ್ರಧಾನ ಕಾರ್ಯದರ್ಶಿ ರೋಷನ್ ಕುಮಾರ್, ಮಾಜಿ ಅಧ್ಯಕ್ಷರು ಸುರೇಶ್, ಮಾಜಿ ಕಾರ್ಯದರ್ಶಿ ಪ್ರದೀಪ್(ಪಪ್ಪಿ), ರಘುನಾಥ್, ರಘು, ವಾಸು, ನವೀನ್, ಪೀಟರ್, ಸೋಮಣ್ಣ ದಿಲೀಪ್, ನಾಗೇಶ್, ಕೃಷ್ಣ, ಸಿದ್ದೇಶ್, ರಮೇಶ್, ಸುರೇಶ್ ಬಾಬು,
- ನಿಂಪುವಾರ್ತೆ
![/* Change button hover color to red */
button:hover,
.wp-block-button__link:hover,
input[type="submit"]:hover {
background-color: red !important;
color: #fff !important; /* Makes text white for contrast */
}](https://rapower28.com/wp-content/uploads/2025/08/WhatsApp-Image-2025-08-23-at-7.28.55-AM-2-1024x454.jpeg)













