
ಕೊಳ್ಳೇಗಾಲ : ದಿನಾಂಕ 20/12/2025 ಹಾಗೂ 21/12/2025 ರಂದು ಕರ್ನಾಟಕ ರಾಜ್ಯ ಅಮೆಚೂರ್ ಖೋ ಖೋ ಸಂಸ್ಥೆಯು ಆಯೋಜಿಸಿರುವ ರಾಜ್ಯಮಟ್ಟದ ಖೋ ಖೋ ಪಂದ್ಯಾವಳಿಗೆ ಚಾಮರಾಜನಗರ ಜಿಲ್ಲಾ ಅಮೆಚೂರ್ ಖೋ ಖೋ ತಂಡವು ಭಾಗವಹಿಸಲಿದೆ.
ಈ ಹಿನ್ನಲೆಯಲ್ಲಿ ಹನೂರು ತಾಲೂಕಿನ ಕಣ್ಣೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಖೋ ಖೋ ತಂಡಕ್ಕೆ ಡಾ. ಗುರುಮೂರ್ತಿಯವರು ಕ್ರೀಡಾ ಸಮವಸ್ತ್ರವನ್ನು ನೀಡಿ ತಂಡಕ್ಕೆ ಶುಭ ಹಾರೈಸಿದರು
ಖೋ ಖೋ ಕ್ರೀಡಾ ಪಟುಗಳಿಗೆ ಸಮವಸ್ತ್ರ ವಿತರಣೆ ಮಾಡಿ ಮಾತನಾಡಿದ ಅವರು, ಖೋ ಖೋ ಆಟವು ಇತರ ಕ್ರೀಡೆಗಳಿಗಿಂತ ಅತಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ.
ಆಟ ಆಡುವಾಗ ವೇಗವಾಗಿ ಓಡುವುದರ ಜೊತೆಗೆ ನಮ್ಮ ದೃಷ್ಟಿ ಸಹ ತುಂಬಾ ಅತಿಮುಖ್ಯ ಆದ್ದರಿಂದ ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳು ತುಂಬಾ ಎಚ್ಚರಿಕೆಯಿಂದ ಆಟವಾಡಬೇಕಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ಶಿವಮ್ಮನವರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಸುರೇಶ್ ಹಾಗೂ ದಿಲೀಪ್,ಸುಮನ್ ಇದ್ದರು
- ನಿಂಪುವಾರ್ತೆ
![/* Change button hover color to red */
button:hover,
.wp-block-button__link:hover,
input[type="submit"]:hover {
background-color: red !important;
color: #fff !important; /* Makes text white for contrast */
}](https://rapower28.com/wp-content/uploads/2025/08/WhatsApp-Image-2025-08-23-at-7.28.55-AM-2-1024x454.jpeg)













