/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಹಣ ಮರುಪಾವತಿ ವಿಳಂಬ – ಕೊಳ್ಳೇಗಾಲ ಕಸಬಾ ಕೃಷಿ ಪತ್ತಿನ ಬ್ಯಾಂಕ್ ಗೆ ಬೀಗ ಜಡಿದ ಜನರು
Image

ಹಣ ಮರುಪಾವತಿ ವಿಳಂಬ – ಕೊಳ್ಳೇಗಾಲ ಕಸಬಾ ಕೃಷಿ ಪತ್ತಿನ ಬ್ಯಾಂಕ್ ಗೆ ಬೀಗ ಜಡಿದ ಜನರು

ಕೊಳ್ಳೇಗಾಲ. ಕಸಬಾ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಠೇವಣಿ ಮಾಡಿ ಹಣವನ್ನು ವಾಪಸ್ ಪಡೆಯಲಾಗದೆ ಪರದಾಡುತ್ತಿರುವ ಠೇವಣಿದಾರರು ಸೋಮವಾರ ಬ್ಯಾಂಕ್‌ಗೆ ಬೀಗ ಹಾಕಿ ಧರಣಿ ನಡೆಸಿದರು.

ಪಟ್ಟಣದ ಬಸ್ತೀಪುರ ರಸ್ತೆಯಲ್ಲಿರುವ ಬ್ಯಾಂಕ್ ಶಾಖೆಯ ಗೇಟ್‌ಗೆ ಬೀಗ ಜಡಿದು, ಸುಮಾರು 30 ಕ್ಕೂ ಹೆಚ್ಚು ಠೇವಣಿದಾರರು ಕುಳಿತು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 50 ರಿಂದ 60 ಮಂದಿ ಠೇವಣಿದಾರರು ಈ ಬ್ಯಾಂಕ್‌ನಲ್ಲಿ ಒಟ್ಟು ₹3 ಕೋಟಿಗೂ ಹೆಚ್ಚು ಮೊತ್ತವನ್ನು ಠೇವಣಿ ಇಟ್ಟಿದ್ದಾರೆ. ಆದರೆ ಕಳೆದ ಹಲವು ತಿಂಗಳಿಂದ ಬ್ಯಾಂಕ್ ಆಡಳಿತ ಹಣ ನೀಡದೆ ನಮ್ಮನ್ನು ದಿನನಿತ್ಯ ಅಲೆದಾಡಿಸುತ್ತಿದೆ. ನಮ್ಮ ಠೇವಣಿಯನ್ನು ತಕ್ಷಣ ವಾಪಸ್ ನೀಡಬೇಕು ಎಂದು ಆಗ್ರಹಿಸಿದರು.

ಠೇವಣಿದಾರರ ತಮ್ಮ ಹಣವನ್ನು ವಾಪಸ್ ಪಡೆಯುವವರೆಗೆ ಪ್ರತಿಭಟನೆಯನ್ನು ಮುಂದುವರಿಸುವ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕೃಷ್ಣ ಮಧುವನಹಳ್ಳಿ 14 ಲಕ್ಷ, ನಾಗರಾಜಪ್ಪ ಹೊಂಡರಬಾಳು 5 ಲಕ್ಷ, ವಿಜಯಕುಮಾರ್ ಬಸವೇಶ್ವರನಗರ, ರಾಜೇಂದ್ರ ಕೊಳ್ಳೇಗಾಲ, ಮಹದೇವಮ್ಮ ಹರಳೆ 20ಲಕ್ಷ, ಮಾದಮ್ಮ ಸಿದ್ದಯ್ಯನಪುರ 1.5 ಲಕ್ಷ, ಮಹದೇವಮ್ಮ ಮುಳ್ಳೂರು , ಜಯಮ್ಮ ಸಿದ್ದಯ್ಯನಪುರ 1 ಲಕ್ಷ, ಮಿಥಿಲೇಸ್ ಎಂ ಕೊಳ್ಳೇಗಾಲ, ಬಸ್ತೀಪುರ ಮಮತಾ, ದೀಪಾ ಸಿಂಗನಲ್ಲೂರು 6.5 ಲಕ್ಷ, ಗಿರೀಶ್ 3ಲಕ್ಷ, ಪುಟ್ಟಮ್ಮ ಸಿದ್ದಯ್ಯನಪುರ 13 ಗ್ರಾಮ್ ಚಿನ್ನ, ಶಿವಮ್ಮ ಮುಳ್ಳೂರು, ಚಿಕ್ಕಮಾದಮ್ಮ ಬಸ್ತೀಪುರ 40 ಸಾವಿರ, ಬೋರಮ ಬಸ್ತೀಪುರ 1 ಲಕ್ಷ,
ಚೌಡೇಶ್ವರಿ ಮಹಿಳಾ ಸಂಘ 40 ಸಾವಿರ, ಕಾಮಗೆರೆ ದೇವೇಂದ್ರ ಸ್ವಾಮಿ 13 ಲಕ್ಷ, ಗೋವಿಂದರಾಜು 2.15 ಲಕ್ಷ ಹಾಗೂ ಇತರರು ಇದ್ದರು.

ಬಳಿಕ ಪ್ರತಿಭಟನಾ ಸ್ಥಳಕ್ಕೆ ಪಿಎಸಿಸಿಎಸ್ ಉಪಾಧ್ಯಕ್ಷರು ಶೇಖರ್, ನಿರ್ದೇಶಕರು ಮಂಜುನಾಥ್, ರವಿ ಭೇಟಿ ನೀಡಿ, ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಎಲ್ಲಾ ಠೇವಣಿದಾರರ ಹಣದ ಬಗ್ಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದ ಮೇರೆಗೆ ಪ್ರತಿಭಟನೆ ಕೈಬಿಟ್ಟು ಠೇವಣಿದಾರರು ವಾಪಸ್ಸು ಮನೆಗೆ ತೆರಳಿದರು.

Releated Posts

ಕೊಳ್ಳೇಗಾಲ: ಪೌರಕಾರ್ಮಿಕರಿಗೆ ಊಟ ಬಡಿಸಿದ ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ಸಮಾಜದಲ್ಲಿ ಕೊಳಕು ಮುಕ್ತ ಪ್ರದೇಶವಾಗಲು ಪೌರಕಾರ್ಮಿಕರು ಮುಖ್ಯ ಕಾರಣವಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಹೇಳಿದರು. ಪಟ್ಟಣದ ಸಿಡಿಎಸ್ ಭವನದಲ್ಲಿ ಬುಧವಾರ ಪೌರ…

ByByN Rajesh Feb 11, 2026

ಕೊಳ್ಳೇಗಾಲ ನಗರಸಭೆ – ಜಿಲ್ಲಾಧಿಕಾರಿ ಶ್ರೀ ರೂಪ ಅವರಿಂದ ಉಳಿತಾಯ ಬಜೆಟ್ ಮಂಡನೆ

ಕೊಳ್ಳೇಗಾಲ ನಗರಸಭೆಯ ೨೦೨೬-೨೭ನೇ ಸಾಲಿನ ಬಜೆಟ್‌ನ ಪಕ್ಷಿ ನೋಟ ಕೊಳ್ಳೇಗಾಲ, ಫೆ, ೧೦- ಕೊಳ್ಳೇಗಾಲ ನಗರಸಭೆಯ ಸಭಾಂಗಣದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ಫೆ.೧೦…

ByByN Rajesh Feb 10, 2026

ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರ ಅಯ್ಕೆ

ಕೊಳ್ಳೇಗಾಲ. ಸತ್ತೇಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಗ್ರಾಮದಲ್ಲಿ ನಡೆದ ಚುನಾವಣೆಯಲ್ಲಿ 8…

ByByN Rajesh Feb 9, 2026

ಕೊಳ್ಳೇಗಾಲ : ಗ್ಯಾರೆಂಟಿ ಯೋಜನೆಗಳಿಂದ ನವ ಕರ್ನಾಟಕ ನಿರ್ಮಾಣ – ಶಾಸಕ ಎ.ಆರ್.ಕೃಷ್ಣಮೂರ್ತಿ

ಸರ್ಕಾರದ ಅಭಿವೃದ್ಧಿ ಯೋಜನೆ, ಕಾರ್ಯಕ್ರಮಗಳು ನವಕರ್ನಾಟಕ ನಿರ್ಮಾಣಕ್ಕೆ ಸಹಕಾರಿ: ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಕೊಳ್ಳೇಗಾಲ. ರಾಜ್ಯಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಅಭಿವೃದ್ಧಿಗಾಗಿ…

ByByN Rajesh Jan 17, 2026

Leave a Reply

Your email address will not be published. Required fields are marked *

Scroll to Top