
ಶಾಸಕ ಎಂಆರ್ ಮಂಜುನಾಥ್ ವಿವಿಧಡೆ ಭೇಟಿ ಸೇತುವೆ ಕಾಮಗಾರಿಗೆ ಸ್ಥಳ ಪರಿಶೀಲನೆ ಹಾಗೂ ರೈತರ ಜಮೀನುಗಳಿಗೆ ತೆರಳುವ ರಸ್ತೆ ಮತ್ತು ಪರುಷೆ ಹಾದಿ ಮಾರ್ಗ ಪರಿಶೀಲನೆ ನಡೆಸಿದರು…
ಹನೂರು ಪಟ್ಟಣದ ಸ್ವಾಮಿ ಹಳ್ಳ ಬಳಿ ಉದ್ದೇಶಿತ ಸೇತುವೆ ನಿರ್ಮಾಣ ಸ್ಥಳ ಹಾಗೂ ಕುರುಬರ ಸ್ಮಶಾನಕ್ಕೆ ತೆರಳುವ ರಸ್ತೆ ಹಾಗೂ ಪಟ್ಟಣದ ಆರ್ ಎಸ್ ದೊಡ್ಡಿಯಿಂದ ಚಿಂಚಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ಪರುಷೆ ಹಾದಿ ಪರಿಶೀಲನೆ ನಡೆಸಿದ ಶಾಸಕ ಎಂಆರ್ ಮಂಜುನಾಥ್…
ನಿವಾಸಿಗಳ ಹಾಗೂ ರೈತರ ಒತ್ತಾಯದ ಮೇರೆಗೆ ಸ್ಥಳ ಪರಿಶೀಲನೆ : ಪಟ್ಟಣದಿಂದ ಸ್ವಾಮಿ ಹಳ್ಳ ದಾಟಿಕೊಂಡು ಕುರುಬರ ಸ್ಮಶಾನಕ್ಕೆ ತೆರಳುವ ಸ್ಥಳದಲ್ಲಿ ಉದ್ದೇಶವಾಗಿರುವ ಸೇತುವೆ ಕಾಮಗಾರಿ ನಡೆಸುವ ಸ್ಥಳವನ್ನು ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ಉತ್ತಮ ಸೇತುವೆ ನಿರ್ಮಾಣ ಮಾಡಿ ಕ್ರಮ ಕೈಗೊಳ್ಳಲು ಮೊದಲ ಹಂತವಾಗಿ 20 ಲಕ್ಷ ಹಣವನ್ನು ಬಿಡುಗಡೆಗೊಳಿಸಲಾಗಿದೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಕ್ರಿಯಾಯೋಜನೆ ಪಟ್ಟಿ ತಯಾರಿಸಿ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು…
ರಸ್ತೆ ಅಭಿವೃದ್ಧಿಗೆ ರೈತರು ಸಹಕರಿಸಿ : ಹನೂರು ಪಟ್ಟಣದಿಂದ ಕುರುಬರ ಮಸಣಕ್ಕೆ ತೆರಳುವ ಪರುಷೆ ಹಾದಿ ಸಂಪರ್ಕ ಕಲ್ಪಿಸುವ ರಸ್ತೆ ಅಕ್ಕಪಕ್ಕದ ರೈತರು ಹಾಗೂ ಆರ್ ಎಸ್ ದೊಡ್ಡಿಯಿಂದ ಚಿಂಚಳ್ಳಿಗೆ ಸಂಪರ್ಕ ಕಲ್ಪಿಸುವ ಅಕ್ಕಪಕ್ಕದ ರೈತರು ಒಂದೆಡೆ ಸೇರಿ ಸಹಕಾರ ನೀಡಿದರೆ ಸುಸಜ್ಜಿತವಾದ ರಸ್ತೆ ನಿರ್ಮಾಣ ಮಾಡಿದರೆ ಈ ಭಾಗದ ರೈತರಿಗೆ ಜಮೀನಿಗೆ ಚಿನ್ನದ ಬೆಲೆ ಬರಲಿದೆ ಹೀಗಾಗಿ ರೈತರು ಸದ್ಬಳಕೆ ಮಾಡಿಕೊಂಡು ಸಂಪೂರ್ಣವಾಗಿ ಸಹಕಾರ ನೀಡಿದರೆ ಉತ್ತಮ ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳದಲ್ಲಿದ್ದ ರೈತರ ಮನವಿಗೆ ಸ್ಪಂದಿಸಿ ಮಾಹಿತಿಯನ್ನು ನೀಡಿದರು.
ಕಿರಿದಾದ ರಸ್ತೆಗಳು ಅನಾನುಕೂಲ : ಹಿಂದಿನಿಂದಲೂ ಕಿರಿದಾದ ರಸ್ತೆಗಳಾಗಿರುವುದರಿಂದ ಈ ಭಾಗದಲ್ಲಿರುವ ರೈತರ ಜಮೀನುಗಳಿಗೆ ತೆರಳಲು ಹಾಗೂ ಬಂದು ಹೋಗಲು ತೊಂದರೆ ಉಂಟಾಗಿತ್ತು ಹಲವಾರು ದಿನಗಳಿಂದ ರೈತರು ರಸ್ತೆ ನಿರ್ಮಾಣ ಮಾಡಿ ಕೊಡುವಂತೆ ಮನವಿ ಮಾಡುತ್ತಿದ್ದಾರೆ ಹೀಗಾಗಿ ಪರಿಶೀಲನೆ ನಡೆಸಿದ್ದೇನೆ ಮುಂದಿನ ದಿನಗಳಲ್ಲಿ ರೈತರು ತಮ್ಮ ಜಮೀನುಗಳಿಗೆ ತೆರಳುವ ರಸ್ತೆ ಅಭಿವೃದ್ಧಿಪಡಿಸಲು ಸಹಕಾರ ನೀಡಬೇಕು ಎಂದರು.
ಡಕ್ ನಿರ್ಮಾಣಕ್ಕೆ ಮನವಿ : ಆರ್ ಎಸ್ ದೊಡ್ಡಿ ಗ್ರಾಮದಿಂದ ಚಿಂಚಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಆರ್ ಎಸ್ ದೊಡ್ಡಿ ಯಿಂದ ಬರುವ ಕೊಳಚೆ ನೀರು, ರಸ್ತೆಯಲ್ಲಿ ಹರಿಯುತ್ತಿದ್ದು ಡಕ್ ನಿರ್ಮಾಣ ಮಾಡಿ ಚರಂಡಿ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ರಸ್ತೆಯಲ್ಲಿ ಓಡಾಡಲು ಅನುಕೂಲ ಕಲ್ಪಿಸುವಂತೆ ರೈತರು ಮನವಿ ಮಾಡಿದರು
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಶಾಸಕರು ಈ ಭಾಗದಲ್ಲಿರುವ ರೈತರಿಗೆ ತೋಟದ ಮನೆಗಳಲ್ಲಿ ವಾಸಿಸುವ ಜನತೆಗೆ ಉತ್ತಮವಾದ ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಅದರಂತೆ ರೈತರು ಸಹ ಪೂರಕವಾಗಿ ಸ್ಪಂದಿಸಿದರೆ ರಸ್ತೆ ಅಭಿವೃದ್ಧಿಯೇ ಆದ್ಯತೆ ನೀಡಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ಇದೆ ವೇಳೆಯಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಮುದ್ದುಗಾಮಶೆಟ್ಟಿ ಮಣಿ ಕೌಂಡರ್ ವೇಲು ಸ್ವಾಮಿ ಜಗನ್ನಾಥ್ ನಾಯ್ಡು ರಾಜು ನಾಯ್ಡು, ಮಂಜೇಶ್ ಇನ್ನಿತರ ರೈತರು ಉಪಸ್ಥಿತರಿದ್ದರು.
ವರದಿ : ನಿಂಪು ರಾಜೇಶ್
![/* Change button hover color to red */
button:hover,
.wp-block-button__link:hover,
input[type="submit"]:hover {
background-color: red !important;
color: #fff !important; /* Makes text white for contrast */
}](https://rapower28.com/wp-content/uploads/2025/08/WhatsApp-Image-2025-08-23-at-7.28.55-AM-2-1024x454.jpeg)












