
ಕೊಳ್ಳೇಗಾಲ. ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಅಂಗವಾಗಿ ಮಂಗಳವಾರ ಅದ್ದೂರಿಯಾಗಿ ಬೆಳ್ಳಿ ರಥ ಮೆರವಣಿಗೆ ನಡೆಯಿತು.
ಪಟ್ಟಣದ ನಾಯಕರ ಬೀದಿಯಲ್ಲಿ ಅಲಂಕೃತಗೊಂಡಿದ್ದ ರಥದಲ್ಲಿದ್ದ ವಾಲ್ಮೀಕಿ ಭಾವಚಿತ್ರಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಪುಷ್ಪನಮನ ಅರ್ಪಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಬಳಿಕ ನಾಯಕರ ಬೀದಿಯಿಂದ ಹೊರಟ ಮೆರವಣಿಗೆ ಕಾವೇರಿ ರಸ್ತೆ, ಚಿಕ್ಕ ನಾಯಕರ ಬೀದಿ, ಚಿನ್ನ ಬೆಳ್ಳಿ ರಸ್ತೆ, ಮಸೀದಿ ಸರ್ಕಲ್, ಡಾ.ಅಂಬೇಡ್ಕರ್ ರಸ್ತೆ, ಎಡಿಬಿ ಸರ್ಕಲ್, ಐ ಬಿ ರಸ್ತೆ ಮೂಲಕ ಗುರುಭವನ ತಲುಪಿತ್ತು.
ಮೆರವಣಿಗೆಯಲ್ಲಿ ವೀರಗಾಸೆ ಕುಣಿತ ಹಾಗೂ ಡೊಲ್ಲು, ತಮಟೆ ಶಬ್ದಕ್ಕೆ ಯುವಕರು, ಮುಖಂಡರು ಕುಣಿದು ಕುಪ್ಪಳಿಸಿದರು.
ಈ ಸಂಧರ್ಭದಲ್ಲಿ ಮಾಜಿ ಸಚಿವರು ಎನ್.ಮಹೇಶ್, ಮಾಜಿ ಶಾಸಕರು ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜು, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಉಪ್ಪಾರ ನಿಗಮ ಮಾಜಿ ರಾಜ್ಯಾಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದತ್ತೇಶ್ ಕುಮಾರ್, ನಾಯಕ ಜನಾಂಗದ ಅಧ್ಯಕ್ಷ ಜಗದೀಶ್ ನಾಯಕ ಹಾಗೂ ಇತರರು ಇದ್ದರು.
ವರದಿ : ನಿಂಪು ರಾಜೇಶ್