
ಕೊಳ್ಳೇಗಾಲ : ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೆ ಸಚಿವರಾಗುವ ಅರ್ಹತೆ ಮತ್ತು ಸಾಮರ್ಥ್ಯ ಎರಡೂ ಇದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾದ ಸುನೀಲ್ ಬೋಸ್ ತಿಳಿಸಿದರು.
ಕೊಳ್ಳೇಗಾಲ ನಗರಸಭ ವ್ಯಾಪ್ತಿಯ ಶಂಕನಪುರ ಬಡಾವಣೆಯಲ್ಲಿ ಸೋಮವಾರ ವೆಟ್ ವೆಲ್ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ ಸಂಸದ ಸುನೀಲ್ ಬೋಸ್ ಅವರು ನಂತರ ಮಾದ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದರು.
ಸಂಪುಟ ಪುನರ್ ರಚನೆಯಾದರೆ ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ಸಿಗುವ ಅವಕಾಶ ಇದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ಸುನೀಲ್ ಬೋಸ್ ಅವರು, ಎ.ಆರ್. ಕೃಷ್ಣಮೂರ್ತಿ ಅವರು ರಾಜಕಾರಣದಲ್ಲಿ ಹಿರಿಯರು, 1994 ರಿಂದಲೂ ರಾಜಕಾರಣದಲ್ಲಿ ಇದ್ದಾರೆ. ಅವರಿಗೆ ಸಚಿವರಾಗುವ ಅರ್ಹತೆ ಮತ್ತು ಸಾಮರ್ಥ್ಯ ಎರಡೂ ಇದೆ. ಈ ಭಾಗದ ಸಂಸತ್ ಸದಸ್ಯನಾಗಿ ನಾನೂ ಕೂಡಾ ಅವರು ಸಚಿವರಾಗಲು ಬಯಸುತ್ತೇನೆ ಎಂದರು.
ವರದಿ – ನಿಂಪು ರಾಜೇಶ್
![/* Change button hover color to red */
button:hover,
.wp-block-button__link:hover,
input[type="submit"]:hover {
background-color: red !important;
color: #fff !important; /* Makes text white for contrast */
}](https://rapower28.com/wp-content/uploads/2025/08/WhatsApp-Image-2025-08-23-at-7.28.55-AM-2-1024x454.jpeg)













