
ಕೊಳ್ಳೇಗಾಲ ಸುದ್ದಿ
ದೀಕ್ಷಾಭೂಮಿ ಯಾತ್ರೆಗೆ ಚಾಲನೆ ನೀಡಿದ ಶಾಸಕ ಎ. ಆರ್ ಕೃಷ್ಣಮೂರ್ತಿ
ಡಾ. ಬಿ. ಆರ್. ಅಂಬೇಡ್ಕರ್ ರವರು ಲಕ್ಷಾಂತರ ಅನುಯಾಯಿಗಳೊಡನೆ ಬೌದ್ಧ ದಮ್ಮ ದೀಕ್ಷೆ ಪಡೆದ ದೀಕ್ಷಾ ಭೂಮಿಯಲ್ಲಿ ನಡೆಯಲಿರುವ ಧಮ್ಮದೀಕ್ಷಾ ಮಹೋತ್ಸವ ಕಾರ್ಯಕ್ರಮವನ್ನು ವೀಕ್ಷಿಸಲು ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಅಂಬೇಡ್ಕರ್ ಅನುಯಾಯಿಗಳು ದೀಕ್ಷಾ ಭೂಮಿ ಯಾತ್ರೆಗೆ ತೆರಳಿದರು,
ದೀಕ್ಷಾಭೂಮಿ ಯಾತ್ರೆಗೆ ಹೊರಟ ಬಸ್ಸುಗಳಿಗೆ ಕೊಳ್ಳೇಗಾಲ ಶಾಸಕ ಎಆರ್ ಕೃಷ್ಣಮೂರ್ತಿಯವರು ಹಸಿರು ನಿಶಾನೆಯನ್ನು ತೋರಿಸಿ ಚಾಲನೆಯನ್ನು ನೀಡಿದರು
ಈ ಸಂದರ್ಭದಲ್ಲಿ ಶಾಸಕರು ಎ. ಆರ್ ಕೃಷ್ಣಮೂರ್ತಿಯವರು ಮಾತನಾಡಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ
ನಾಯಕತ್ವದಲ್ಲಿ 2023 ರಂದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸರ್ಕಾರದಲ್ಲಿ ಎಚ್ ಸಿ. ಮಹದೇವಪ್ಪ ರವರ ಸಮಾಜ ಕಲ್ಯಾಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಅನೇಕ ಐತಿಹಾಸಿಕ ತೀರ್ಮಾನಗಳನ್ನು ಕೈಗೊಂಡು ರಾಜ್ಯದಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಅವಕಾಶ ಮಾಡಿದೆ
ನಮ್ಮ ಸರ್ಕಾರದ ಕಾರ್ಯಕ್ರಮ ಮತ್ತು ಸದನದಲ್ಲಿಯೂ ಕೂಡ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಸಭೆಯನ್ನು ಪ್ರಾರಂಭಿಸಲಾಗುತ್ತದೆ
ಹಾಗೂ ರಾಜ್ಯಾದಂತ್ಯ ಮಾನವ ಸರಪಳಿಯನ್ನು ಮಾಡಿ ಐತಿಹಾಸಿಕ ಕಾರ್ಯವನ್ನು ಮಾಡಲಾಗಿದೆ ಕಳೆದ ಮೂರು ವರ್ಷಗಳಿಂದ ನಮ್ಮ ಚಾಮರಾಜನಗರ ಜಿಲ್ಲೆಯ 10 ಬಸ್ಸುಗಳಲ್ಲಿ ದೀಕ್ಷಾ ಭೂಮಿಗೆ ಹೊರಡುವ ಅವಕಾಶ ಮಾಡಲಾಗಿದೆ,
ಜಿಲ್ಲೆಯ ಪರಿಶಿಷ್ಟ ಜಾತಿ ಸಮುದಾಯದವರು ದೀಕ್ಷಾ ಭೂಮಿಗೆ ಹೊರಡಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮೂಲಕ ಅರ್ಜಿಯನ್ನು ಸಲ್ಲಿಸಿ ನೊಂದಣಿ ಮಾಡಿಸಿಕೊಂಡು ದೀಕ್ಷಾ ಭೂಮಿಗೆ ಹೊರಡುವ
ಅವಕಾಶ ಮಾಡಿಕೊಡಲಾಗಿದ್ದು
ದೀಕ್ಷಾ ಭೂಮಿಗೆ ಚಾಲನೆಯನ್ನು ಕೊಡಲಾಗಿದೆ
ಬಾಬಾ ಸಾಹೇಬ್ ಅಂಬೇಡ್ಕರ್ ರವರು ದೀಕ್ಷೆ ಪಡೆದ ದೀಕ್ಷಾಭೂಮಿಯನ್ನು ನೋಡುವ ಭಾಗ್ಯವನ್ನು ನೀಡಲಾಗಿದೆ ಹಾಗೂ ಅವರು ದೀಕ್ಷಾ ಭೂಮಿ ಯಾತ್ರೆಯನ್ನು ಮುಗಿಸಿ ಕ್ಷೇಮವಾಗಿ ಮನೆಗೆ ತಲುಪುವ ವರೆಗೂ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದರು
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಕೇಶವಮೂರ್ತಿ, ನಗರಸಭೆ ಸದಸ್ಯರಾದ ಶಾಂತರಾಜು, ಮಂಜುನಾಥ್, ಪಿ. ಕೃಷ್ಣರಾಜು ರಮೇಶ್ ಸಿದ್ದಾರ್ಥ, ಪೂಜಯ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಹಾಗೂ ಇನ್ನಿತರರು ಇದ್ದರು
ವರದಿ : ಎನ್.ಸುರೇಶ್