
ಶಿಕ್ಷಣವೇ ಧರ್ಮ ಶಿಕ್ಷಣವೇ ಆಚಾರ ಶಿಕ್ಷಣವೇ ಸಮಾಜದ ಬಹು ಮುಖ್ಯ ಸುಧಾರಣೆ ಎಂದು ಸುತ್ತೂರು ಲಿಂಗೈಕ್ಯ ಶ್ರೀಗಳಾದ ರಾಜೇಂದ್ರ ಮಹಾಸ್ವಾಮಿಗಳು ಆರಂಭಿಸಿದ್ದ ಶಿಕ್ಷಣ ಕ್ರಾಂತಿಯೇ ಮಾದರಿಯಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮುರುಡೇಶ್ವರ ಸ್ವಾಮಿ ಅಭಿಮತ ವ್ಯಕ್ತಪಡಿಸಿದ್ದರು….
ಹನೂರು ತಾಲೂಕಿನ ಅರ್ಜಿಪುರ ಜೆಎಸ್ಎಸ್ ಪ್ರೌಢಶಾಲೆಯ ಆವರಣದಲ್ಲಿ ನಡೆದ ಲಿಂಗೈಕ್ಯ ಜಗದ್ಗುರು ಶ್ರೀಗಳಾದ ರಾಜೇಂದ್ರ ಮಹಾಸ್ವಾಮಿಗಳ ಶತ್ತೊೂತರ ದಶಮಾನೋತ್ಸವ 110 ನೆ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಅವರು ಮಾತನಾಡಿದರು….
ಲಿಂಗೈಕ್ಯ ಶಿವರಾತ್ರಿ ಮಹಾ ರಾಜೇಂದ್ರ ಸ್ವಾಮೀಜಿಗಳು ಶಿಕ್ಷಣ ಕ್ರಾಂತಿ ಹಮ್ಮಿಕೊಳ್ಳುವ ಮೂಲಕ ಕರ್ನಾಟಕದ ಎಲ್ಲೆ ಅಲ್ಲದೆ ದೇಶಾದ್ಯಂತ ಶಿಕ್ಷಣ ಕ್ರಾಂತಿಯನ್ನೇ ಹಮ್ಮಿಕೊಳ್ಳುವ ಮೂಲಕ ಜನಸಾಮಾನ್ಯರ ಮನಸ್ಸಿನಲ್ಲಿ ಅಜರಾಮರಾಗಿ ಉಳಿಯುವಂತ ಕೆಲಸವನ್ನು ಹಮ್ಮಿಕೊಳ್ಳುವ ಮೂಲಕ ಇಂದಿನ ಯುವ ಜನತೆಗೆ ಸಮಾಜದ ದೇಶದ ಎಲ್ಲಾ ಸಮುದಾಯಗಳ ಒಳತಿಗಾಗಿ ಶಿಕ್ಷಣಕ್ರಾಂತಿಯನ್ನೇ ಮಾಡಿರುವ ಲಿಂಗೈಕ್ಯ ಶ್ರೀ ರಾಜೇಂದ್ರ ಸ್ವಾಮಿಗಳ ನೂರನೇ ಜಯಂತೋತ್ಸವ ದೇಶಾದ್ಯಂತ ಸಂಭ್ರಮ ಸಡಗರದೊಂದಿಗೆ ಹಮ್ಮಿಕೊಳ್ಳಲಾಗಿರುವುದು ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಕಾರ್ಯಕ್ರಮ ಇದಾಗಿದೆ ಎಂದರು…
ಕಾರ್ಯಕ್ರಮದಲ್ಲಿ ಅಜ್ಜಿಪುರ ಶ್ರೀ ಮಠದ ನಂದೀಶ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಾರ್ಟಳ್ಳಿ ಜೆಎಸ್ಎಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಶಿವಕುಮಾರ್ ನುಡಿನ ಮನ ಸಲ್ಲಿಸಿದರು ಮುಖ್ಯ ಶಿಕ್ಷಕ ಜಯಪ್ಪ ಹಾಗೂ ಸಹ ಶಿಕ್ಷಕರು ಶಾಲಾ ವಿದ್ಯಾರ್ಥಿಗಳು ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…..
ವರದಿ : ನಿಂಪು ರಾಜೇಶ್