
ಹನೂರು : ಚರಂಡಿ ಸ್ವಚ್ಛತೆಗೊಳಿಸಿಲ್ಲ ಗುಂಡಿ ಬಿದ್ದ ರಸ್ತೆಗೆ ಮಣ್ಣು ಹಾಕಿಲ್ಲ ಎಂದು ಗ್ರಾಮದ ಮನ್ನಾದೇ ಗೌಡ ಎಂಬುವರು ಗ್ರಾಮ ಪಂಚಾಯಿತಿ ಕಚೇರಿಗೆ ಮುಳ್ಳು ಹಾಕಿ ವಿನೂತನವಾಗಿ ಪ್ರತಿಭಟನೆ ಮಾಡಿದ ಘಟನೆ ಜರುಗಿದೆ.
ಹನೂರು ತಾಲೂಕಿನ ಅಜ್ಜಿಪುರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಚರಂಡಿಗಳಲ್ಲಿ ಉಳು ತುಂಬಿ ಗಬ್ಬು ನಾರುತ್ತಿದೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ನಾಗರಿಕರು ಓಡಾಡದ ಸ್ಥಿತಿಯಲ್ಲಿ ಇರುವ ಬಗ್ಗೆ ಮತ್ತು ರಸ್ತೆಯಲ್ಲಿ ಗುಂಡಿಗಳು ಬಿದ್ದು ಹಲವರು ಗಾಯಗೊಂಡಿದ್ದು ಗುಂಡಿ ಮುಚ್ಚುವಂತೆ ಕಳೆದ ಮೂರು ತಿಂಗಳ ಹಿಂದೆ ಮನವಿ ಸಲ್ಲಿಸಿದ್ದರು
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಪಂದಿಸದೆ ಇರುವುದರಿಂದ ಬೇಸತ್ತ ಗ್ರಾಮದ ನಾಗರಿಕ ಮನ್ನಾದೇ ಗೌಡ ಗ್ರಾಮ ಪಂಚಾಯಿತಿ ಕಚೇರಿ ಬಾಗಿಲಿಗೆ ಮುಳ್ಳು ಬೇಲಿ ಹಾಕಿ ಪ್ರತಿಭಟನೆ ನಡೆಸಿದ ಪ್ರಸಂಗ ಜರುಗಿದೆ.
ಗ್ರಾಮದಲ್ಲಿ ಚರಂಡಿ ಊಳು ತುಂಬಿತ ಕಸಕಡ್ಡಿಯಿಂದ ರಾಡಿಯನ್ನು ತೆರವುಗೊಳಿಸಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಗ್ರಾಮದ ವನ್ಯಾಕುಲ ಕ್ಷತ್ರಿಯ ಬಡಾವಣೆಯ ನಿವಾಸಿ ಮನ್ನಾದೇ ಗೌಡ ಕಳೆದ ಮೂರು ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದರು ಸ್ಪಂದಿಸದೆ ಇರುವುದರಿಂದ ಬೇಸತ್ತ ನಾಗರಿಕ ಗ್ರಾಮ ಪಂಚಾಯಿತಿ ಕಚೇರಿ ಬಾಗಲಿಗೆ ಮುಳ್ಳು ಬೇಲಿ ಹಾಕಿ ವಿನೂತನವಾಗಿ ಪ್ರತಿಭಟನೆ ನಡೆಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಗ್ರಾಮ ಪಂಚಾಯಿತಿ ಕಾರ್ಯವೈಕರಿ ಬಗ್ಗೆ ಖಂಡನೆ ವ್ಯಕ್ತವಾಗಿದೆ..
ವರದಿ : ನಿಂಪು ರಾಜೇಶ್