
ಬೌದ್ಧ ಬಿಕ್ಕು ಮನೋರಖಿತ ಬಂತೇಜಿ ಅವರು ಸಭೆಯ ದಿವ್ಯ ಸಾನಿದ್ಯ ವಹಿಸಿದ್ದರು. ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳನ್ನು ಮಹಿಳೆಯರು ಹೆಚ್ಚು ಸದ್ಬಳಕೆ ಮಾಡಿ ಕೊಳ್ಳಬೇಕು. ಮನೆಯಲ್ಲಿ ಗೃಹ ವ್ಯವಹಾರಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಆರ್ಥಿಕ ಸ್ವಾವಲಂಬನೆ ಪಡೆದು ಕೊಳ್ಳಬೇಕು ಎಂದು ತಿಳಿಸಿದರು.
ಮುಂದುವರಿದು ಮಾತನಾಡಿದ ಅವರು ಜನಪ್ರತಿನಿಧಿಗಳು ಪಕ್ಷಬೇದ ಮರೆತು ಜನರ ಸೇವೆಗೆ ಮುಂದಾಗಬೇಕು. ಒಬ್ಬ ತಂದೆ ಮಗನ ಮೇಲೆ ಕಾಳಜಿ ವಹಿಸುವಂತೆ ಜನಪ್ರತಿನಿಧಿಗಳು ಎಲ್ಲರ ಅಭಿವೃದ್ಧಿಗಾಗಿ ಮುಂದಾಗಬೇಕು ಎಂದರು.
ಅಧ್ಯಕ್ಷರಾದ ಶಾಂತರಾಜು, ನಿರ್ದೇಶಕರಾದ ಶಿವಣ್ಷ, ಮರಿಯಮ್ಮ, ಲಿಂಗಯ್ಯ, ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯೋಗಾನಂದ ಮತ್ತು ಸದಸ್ಯರು ಇದ್ದರು.
ವರದಿ : ನಿಂಪು ರಾಜೇಶ್