
ಹನೂರು : ಕಾಡುಗಳ್ಳ ನರಹಂತಕ ದಂತಚೋರ ವೀರಪ್ಪನ್ ನಿಂದ ಮರಣ ಹೊಂದಿದ್ದ ಡಿಸಿಎಫ್ ಕೀರ್ತಿ ಚಕ್ರ ಶ್ರೀನಿವಾಸನ್ ಅರಣ್ಯ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ ಅವರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರು ಮುನ್ನಡೆಯಬೇಕು ಎಂದು ಕಾವೇರಿ ವನ್ಯಜೀವಿ ವಲಯದ ಉಪ ಸಂರಕ್ಷಣಾಧಿಕಾರಿ ಸುರೇಂದ್ರ ತಿಳಿಸಿದರು.
ಹನೂರು ತಾಲೂಕಿನ ಗೋಪಿನಾಥಂ ಯಾರ್ಕೆಯಂ ಹಳ್ಳದ ಅರಣ್ಯ ಪ್ರದೇಶದ ಶ್ರೀನಿವಾಸನ್ ರವರ ಹುತಾತ್ಮ ಸ್ಥಳದಲ್ಲಿ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು…
ದಿವಂಗತ ಡಿಸಿಎಫ್ ಶ್ರೀನಿವಾಸನ್ ರವರು ತಮ್ಮ ಪ್ರಾಣಕ್ಕೆ ಅಪಾಯವಿದೆ ಎಂಬುದು ಗೊತ್ತಿದ್ದರೂ ಕಾಡುಗಳ ನರಹಂತಕ್ಕ ವೀರಪ್ಪನನ್ನು ಮನ ಪರಿವರ್ತನೆ ಮಾಡಲು ಹೋಗಿ ಆತನ ಕುತಂತ್ರಕ್ಕೆ ಬಲಿಯಾದವರು ಅವರು ವೀರಪ್ಪನ್ ನಿಂದ ಹತನಾದರೂ ಇಂದಿಗೂ ಗೋಪಿನಾಥ ಜನರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಮನಸ್ಸಿನಲ್ಲಿ ಅಜರಾಮರಾಗಿದ್ದಾರೆ ಅವರ ಕರ್ತವ್ಯ ನಿಷ್ಠೆ ಇಂದಿನ ಅರಣ್ಯ ಇಲಾಖೆ ಸಿಬ್ಬಂದಿಗೆ ಅಧಿಕಾರಿ ವರ್ಗದವರಿಗೆ ಆದರ್ಶವಾಗಬೇಕಾಗಿದೆ ಎಂದರು…
ನಿವೃತ್ತ ಉಪ ಸಮರಕ್ಷಣಾಧಿಕಾರಿ ಅಂಕರಾಜ್ ಮಾತನಾಡಿ : ಡಿಸೆಪ್ ಶ್ರೀನಿವಾಸನ್ ರವರ ಸೇವೆ ಇಂದಿಗೂ ಎಲ್ಲರಿಗೂ ಮಾದರಿಯಾಗಿದೆ ಈ ಸ್ಥಳ ಶಕ್ತಿ ಕೇಂದ್ರವಾಗಿ ಪರಿವರ್ತನೆಯಾಗಿದೆ ವೀರಪ್ಪನ್ ಹಿಡಿಯಲು ಹೋದಂತಹ ಹುತಾತ್ಮ ಕೀರ್ತಿ ಚಕ್ರ ಡಿಸಿಎಫ್ ಶ್ರೀನಿವಾಸನ್ ಅವರು ಮಾನವ ಸಂಕುಲದ ಜೊತೆಗೆ ಪ್ರಾಣಿ-ಪಕ್ಷಿಗಳ ಸಂರಕ್ಷಿಸುವ ಜೊತೆಗೆ ಕಾಡುಪ್ರಾಣಿಗಳನ್ನು ಹತ್ಯೆ ಮಾಡುತ್ತಿದ್ದ ನರಹಂತಕ ದಂತಚೋರ ವೀರಪ್ಪನ್ನ ಹಿಡಿಯಲು ಹೋಗಿದ್ದಾಗ ಮೋಸದಿಂದ ಹುತಾತ್ಮರಾಗಿದ್ದಾರೆ
ಅವರ ಉದ್ದೇಶ ಕಾಡುಪ್ರಾಣಿಗಳ ಸಂಕುಲವನ್ನು ಉಳಿಸಲು ಮತ್ತು ಮುಂದೆ ಇಂತಹ ಕಾಡುಗಳ ಸಂಕುಲವನ್ನೇ ನಿರ್ಮೂಲ ಮಾಡಲು ಪಣತೊಟ್ಟಿದ್ದ ವೀರಸೇನಾನಿ ಶ್ರೀನಿವಾಸನ್ ರವರು ಇಂದಿಗೂ ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ಸಿಬ್ಬಂದಿ ವರ್ಗದವರ ಮತ್ತು ಇಲ್ಲಿನ ಸುತ್ತಮುತ್ತ ಇರುವ ಗ್ರಾಮಗಳಲ್ಲಿ ಹೆಸರುವಾಸಿಯಾಗಿ ಕೀರ್ತಿ ಚಕ್ರ ಪಡೆದಂತಹ ವ್ಯಕ್ತಿಯನ್ನು ಕಳೆದುಕೊಂಡು ಅವರ ಮಾರ್ಗದರ್ಶನದಲ್ಲಿ ಇಂದಿಗೂ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ವರ್ಗದವರು ಮುನ್ನಡೆಯುತ್ತಿರುವುದು ದುಃಖದ ಜೊತೆ ಕರ್ತವ್ಯ ನಿರ್ವಹಿಸುವಂತಾಗಿದೆ.ಪ್ರಾಣತ್ಯಾಗ ಬಲಿದಾನದಿಂದ ಇಂದು ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದ ವರ್ಗದವರು ನಿಟ್ಟಿಸುವುದು ಕೆಲಸ ನಿರ್ವಹಿಸುತ್ತಿರುವುದು ಎಲ್ಲರಿಗೂ ಅವರ ಸೇವೆ ಸದಾ ಸ್ಮರಣೀಯವಾದದ್ದಾಗಿದೆ ಎಂದರು…
ಇದೇ ಸಂದರ್ಭದಲ್ಲಿ ಹುತಾತ್ಮ ಡಿಸಿಎಫ್ ಶ್ರೀನಿವಾಸನ್ ಅವರ ಸ್ಮಾರಕಕ್ಕೆ ಅಧಿಕಾರಿ ಸಿಬ್ಬಂದಿ ವರ್ಗದವರಿಂದ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರಿಂದ ಗೌರವ ಸಮರ್ಪಣೆ ಸಲ್ಲಿಸಲಾಯಿತು…
ಇದೇ ಸಂದರ್ಭದಲ್ಲಿ ಮಲೆ ಮಾದೇಶ್ವರ ವನ್ಯಜೀವಿ ವಲಯದ ಉಪ ಸಂರಕ್ಷಣಾಧಿಕಾರಿ ಭಾಸ್ಕರ್ ಕನಕಪುರ ವಲಯದ ಉಪ ಸಂರಕ್ಷಣೆ ಅಧಿಕಾರಿಗಳಾದ ನಾಗೇಂದ್ರ ಸಹಾಯಕಾರಣ್ಯ ಸಂರಕ್ಷಣಾ ವಲಯ ಅಧಿಕಾರಿ ಮರಿಸ್ವಾಮಿ ಹಾಗೂ ಅರಣ್ಯಾಧಿಕಾರಿಗಳಾದ ಲೋಕೇಶ್ ಚೌಹಾನ್ ನಿರಂಜನ್ ಕುಮಾರ್ ಸಂದೀಪ್ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಗೋಪಿನಾಥಮ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…..
ವರದಿ : ನಿಂಪು ರಾಜೇಶ್