
ಕೊಳ್ಳೇಗಾಲ. ಪಟ್ಟಣದ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲಾಗಿದ್ದ ದೊಡ್ಡ ಗಣಪತಿಯ ವಿಸರ್ಜನೆ ಮೆರವಣಿಗೆ ಗುರುವಾರ ಅದ್ದೂರಿಯಾಗಿ ಜರುಗಿತು.
ಈ ಸಂದರ್ಭ ಆಂಜನೇಯ, ಗಣಪ, ಶಿವ ವೇಷಧಾರಿಗಳು ಹಾಗೂ ಅರ್ಚಕರು ಟಿ.ವಿ.ಎಸ್ ರಾಘವನ್ ರವರು ತಮ್ಮ ಶ್ವಾನಗಳನ್ನು ಹಿಡಿದು
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಗಮನಸೆಳೆದವು
ಮೆರವಣಿಗೆಯು ವೀರಗಾಸೆ, ನಂದಿಕಂಬ, ಡೊಳ್ಳು, ತಮಟೆ ಸೇರಿದ ಸಾಂಸ್ಕೃತಿಕ ತಂಡಗಳ ಸಮ್ಮುಖದಲ್ಲಿ ಆರಂಭಗೊಂಡು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿಜೃಂಭಣೆಯಿಂದ ಸಾಗಿತು.
ಮೆರವಣಿಗೆಯಲ್ಲಿ ಪಟಾಕಿ ಸಿಡಿಸಿ, ಡೊಲ್ಲು,ತಮಟೆ ಶಬ್ದಕ್ಕೆ ನೆರೆದಿದ್ದ ಭಕ್ತ ವೃಂದ ಕುಣಿದು ಕುಪ್ಪಳಿಸಿದರು.
ಯಾವುದೇ ಅಹಿತಕರ ಘಟನೆಗಳು ಉಂಟಾಗದಂತೆ ಎಸ್ಪಿ ಡಾ.ಕವಿತಾ, ಡಿವೈಎಸ್ಪಿ ಧರ್ಮೇಂದ್ರ ರವರ ನೇತೃತ್ವದಲ್ಲಿ ಬಿಗಿಭದ್ರತೆ ಒದಗಿಸಲಾಯಿತು.
ವರದಿ : ನಿಂಪು ರಾಜೇಶ್