
. ಕೊಳ್ಳೇಗಾಲ: ದಿನಾಂಕ: 10-09-2025 ರಂದು ರಾತ್ರಿ 8 ಗಂಟೆಯಲ್ಲಿ ಕೊಳ್ಳೇಗಾಲ ವಲಯದ ಅಬಕಾರಿ ನಿರೀಕ್ಷಕ ದಯಾನಂದ ಸಿ.ಎಂ. ರವರ ಮಾರ್ಗದರ್ಶನದಂತೆ ಕೊಳ್ಳೇಗಾಲ ವಲಯದ ಶ್ರೀಧರ್ ಡಿ ಅಬಕಾರಿ ಉಪ ನಿರೀಕ್ಷಕ ಸಿಬ್ಬಂದಿಗಳೊಂದಿಗೆ ಹನೂರು ತಾಲ್ಲೂಕು ಡಿ ಎಂ ಸಮುದ್ರ ಗ್ರಾಮದ ವ್ಯಾಪ್ತಿಯಲ್ಲಿ ಅಬಕಾರಿ ಗಸ್ತು ಕಾರ್ಯವನ್ನು ನಡೆಸುತ್ತಿದ್ದಾಗ ಎಂ ಟಿ ದೊಡ್ಡಿ ಗ್ರಾಮದ ಜಮೀನಿನ ಮನೆಯಲ್ಲಿ ವೆಂಕಟರಮಣೆಗೌಡ ಬಿನ್ ಲೇಟ್ ಪಚ್ಚೆಗೌಡ ಎಂಬುವವನು ಅಕ್ರಮವಾಗಿ ಒಣಗಾಂಜಾವನ್ನು ಮಾರಾಟ ಮಾಡುವ ಸಲುವಾಗಿ ದಾಸ್ತಾನು ಮಾಡಿರುವುದಾಗಿ ಬಂದ ಮಾಹಿತಿಯ ಮೇರೆಗೆ ಸದರಿ ಸ್ಥಳದಲ್ಲಿ ಅಬಕಾರಿ ಧಾಳಿ ಕಾರ್ಯ ನಡೆಸಾಲಾಗಿ ಒಂದು 10 ಲೀಟರ್ ಸಾಮರ್ಥ್ಯದ ಕೇಸರಿ ಬಣ್ಣದ ಹಾಲಿನ ಕ್ಯಾನ್ ನಲ್ಲಿ 2,568 kg ಗ್ರಾಂ ಒಣಗಾಂಜಾವನ್ನು ದಾಸ್ತಾನು ಮಾಡಿರುವುದು ಕಂಡು ಬಂದ ಹಿನ್ನಲೆಯಲ್ಲಿ ಸದರಿ ಸ್ಥಳದಲ್ಲಿ ಸ್ಥಳ ಮಹಜರ್ ನಡೆಸಿ ಗಾಂಜಾವನ್ನು ಇಲಾಖೆ ವಶಕ್ಕೆ ವಶಪಡಿಸಿ ಕೊಳ್ಳಲಾಗಿರುತ್ತದೆ,
ಇದರ ಅಂದಾಜು ಮೌಲ್ಯ ರೂ 75,000/- ಆಗಿರುತ್ತದೆ. ಆರೋಪಿಯನ್ನು ದಸ್ತಗಿರಿ ಮಾಡಿ ಸದರಿ ಆರೋಪಿಯ ಮೇಲೆ ಕಾನೂನು ಕ್ರಮ ಜರುಗಿಸಲು ಅಬಕಾರಿ ನಿರೀಕ್ಷಕರು ಕೊಳ್ಳೇಗಾಲ ವಲಯ ರವರಿಗೆ ಪ್ರಕರಣವನ್ನು ದಾಖಲಿಸಲು ಮನವಿ ಮಾಡಿ ಕಡತ ಹಾಗೂ ಗಾಂಜಾವನ್ನು ಹಸ್ತಾಂತರಿಸಲಾಗಿದೆ
. ಧಾಳಿಯ ಕಾರ್ಯದಲ್ಲಿ ವಲಯ ಸಿಬ್ಬಂದಿಯಾದ ಅಬಕಾರಿ ಮುಖ್ಯಪೇದೆ ರಮೇಶ್ ಹಾಗೂ ಕಾನ್ಸ್ಟೇಬಲ್ ಶಾಂತರಾಜು ರವರು ಭಾಗವಹಿಸಿರುತ್ತಾರೆ.
ವರದಿ : ನಿಂಪು ರಾಜೇಶ್