
ಮೂಗೂರು: ಟಿ ನರಸೀಪುರ ಟೌನ್ ಪೊಲೀಸ್ ಠಾಣೆಯ ದಕ್ಷ ಪೊಲೀಸ್ ಇನ್ಸ್ಪೆಕ್ಟರ್ ಧನ೦ಜಯ್ ಹಾಗೂ ಸಬ್ ಇನ್ಸ್ಪೆಕ್ಟರ್ ಜಗದೀಶ್ ರವರ ವಿರುದ್ಧ ಪಟ್ಟಭದ್ರ ವ್ಯಕ್ತಿಗಳು :ಹಾಗೂ ಕೆಲವು ಸಂಘಟನೆ ಮುಖಂಡರುಗಳು ಇಲ್ಲಸಲ್ಲದ್ದ ಆರೋಪ ಮಾಡುತ್ತಿರುವುದನ್ನು ಇಲ್ಲಿನ ದಲಿತ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ
ಇಲ್ಲಿನ ಖಾಸಾಗಿ ಹೋಟಲ್ ನಲ್ಲಿ ಕೆರೆಯಲಾಗಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಮುಖಂಡ ಎಂ.ಎಂ. ಜಗದೀಶ್ ಮಾತನಾಡಿ ನಿಷ್ಠ ವಂತ ದಕ್ಷ ಪೋಲೀಸ್ ಇನ್ಸ್ಪೆಕ್ಟರ್ ಧನಂಜಯ್ ರವರು ತಾಲೂಕಿನಲ್ಲಿ ಅಧಿಕಾರ ವಹಿಸಿಕೊಂಡ ಮೇಲೆ ಕಾನೂನು ಸುವ್ಯಸ್ಥೆಗೆ ಮೊದಲ ಅಧ್ಯತೆ ನೀಡಿ ಕಳ್ಳ ಕಾಕರು ಜೂಜುಕೊರರು ಪುಂಡ ಪೋಲಿಗಳನ್ನು ಜೈಲುಗಟ್ಟುವ ಮೂಲಕ ಸಾಕಷ್ಟು ಸುದಾರಣೆ ಮಾಡಿದ್ದಾರೆ ಹಾಗೂ ಪಟ್ಟಣದ ಮುಖ್ಯ ರಸ್ತೆಗಳನ್ನು ಬೀದಿ ಬದಿ ವ್ಯಾಪಾರಿಳು ಅಕ್ರಮಿಸಿಕೊಂಡು ವ್ಯಾಪಾರ ವಾಹಿವಾಟು ನಡೆಸಿ ತಿರುಗಾಡಲು ತೊಂದರೆ ನೀಡುತಿದ್ದರು. ಇದನ್ನು ಮನಗಂಡ ಪೋಲೀಸ್ ಅಧಿಕಾರಿಗಳು ರಸ್ತೆಬದಿ ವ್ಯಾಪಾರಿಗಳಿಗೆ ತಿಳಿಹೇಳುವುದರ ಮೂಲಕ ಇವರನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸ್ವಕ್ಷೇತ್ರ ಶಾಸಕ ಹಾಗೂ ಸಚಿವರಾದ ಹೆಚ್. ಸಿ ಮಹದೇವಪ್ಪ ರವರಿಂದಲೇ ಕೆಲಸ ವೈಖರಿಯಲ್ಲಿ ಪ್ರಸಂಸೆ ಹೊಂದಿದ್ದಾರೆ ಇಂಥ ಪ್ರಮಾಣಿಕ ದಕ್ಷ ಪೋಲೀಸ್ ಅಧಿಕಾರಿಗಳುನ್ನು ಸಹಿಸದ ಕೆಲವು ಸಂಘಟನೆ ಮುಖಂಡರುಗಳು ತಮ್ಮ ವ್ಯಯಕ್ತಿಕ ವಿಚಾರಕ್ಕೆ ನಿಷ್ಠ ವಂತ ಖಡಕ್ ಪೋಲೀಸ್ ಅಧಿಕಾರಿ ಗಳ ವಿರುದ್ಧ ಇಲ್ಲ ಸಲ್ಲಿದ ಆರೋಪ ಮಾಡುತ್ತಿದ್ದಾರೆ ಎಂದರು.
ಮುಖಂಡ ಕೃಷ್ಣಸ್ವಾಮಿ ಮಾತನಾಡಿ ಪೋಲೀಸ್ ಠಾಣೆಗಳಲ್ಲಿ ದಳ್ಳಾಳಿಗಳಿಗೆ ಅವಕಾಶ ನೀಡದಿರುವುದನ್ನು ಸಹಿಸದ ಕೆಲವರು ಇವರ ವಿರುದ್ಧ ಎತ್ತು ಕಟ್ಟಿ ಇಲ್ಲಸಲ್ಲದ ಆರೋಪದ ಹುನ್ನಾರ ನಡೆಸುತ್ತಿದ್ದಾರೆ ದಕ್ಷ ಪೊಲೀಸ್ ಅಧಿಕಾರಿಯ ಮುಖಕ್ಕೆ ಮಸಿ ಬಳಿಯುವ ಕುತಂತ್ರ ಕಾರ್ಯ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು
ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಒದಗಿಸುವ ಜನಸಾಮಾನ್ಯರಿಗೆ ಇವರು ಸಂಘ ಸಂಸ್ಥೆಗಳ ಮಧ್ಯಸ್ಥಿಕೆ ವಹಿಸುವುದು ಖಂಡಿಸುವುದು ಕೆಲವರಿಗೆ ಸಹಿಸಿಕೊಳ್ಳಲಾಗುತ್ತಿರಲಿಲ್ಲ
ಪಟ್ಟಣದ ಪುರಸಭೆ ಮಾಜಿ ಅಧ್ಯಕ್ಷ ಮದನ್ ರಾಜ್ ರವರು ಪೋಲೀಸ್ ಅಧಿಕಾರಿಯನ್ನು ವಸಲಿಗಾರ ದಂದೆಕೋರ ಎಂದು ಹೇಳಿರುವುದು ಸಮಂಜಸವಲ್ಲ ಎಂದರು. ಇದನ್ನು ಮೂಗೂರು ಹೋಬಳಿ ಮುಖಂಡರುಗಳು ಖಂಡಿಸುತ್ತವೆ ಯಾರೆ ಯಾಗಲಿ ಸಂಘ-ಸಂಸ್ಥೆ ಮುಖಂಡರುಗಳಾಗಲಿ ಇವರನ್ನು ತೇಜೆವದೆ ಮಾಡುವುದನ್ನು ಕೈ ಬಿಡಬೇಕು ಎಂದರು.
ಪ್ರತಿಕಾಗೋಷ್ಠಿಯಲ್ಲಿ ಗ್ರಾಪಂ ಸದಸ್ಯರಾದ ಪುಟ್ಟ ಮಾದಯ್ಯ, ಮಹೇಶ್, ಹಾಗೂ ಮುಖಂಡುಗಳಾದ ರಾಜಣ್ಣ, ಚಿಕ್ಕಮಾಧು, ಸುಧೀರ್, ವಿಕಾಶ್, ಮಹದೇವ್ ಸೇರಿದಂತೆ ಇತರರು ಇದ್ದರು..