
ಲೆಕ್ಕಾಚಾರವೇ ಇಲ್ಲಿ
ನಮ್ಮದು ವೈವಿಧ್ಯಮಯ ದೇಶ
ಹೇಳಲು ಎಷ್ಟೊಂದು ಸೊಗಸು
ಹೇಳಿದವರೆಷ್ಟೊ ಕೇಳಿದವರೆಷ್ಟೋ…
ಆದ್ರೆನೂ ಬಂತು ಪ್ರಯೋಜನ
ಉಳ್ಳವರು ಮನಬಂದಂತೆ ಕುಣಿಯುವಾಗ
ಇಲ್ಲದವರು ಕೈ ಕಟ್ಟಿ ಕಣ್ಣು ಮುಚ್ಚಿಕುಳಿತುಕೊಳ್ಳುವರಾ….?
ಧರ್ಮ-ಧರ್ಮದೊಳಗೆ ನೊಕಿ
ಧರ್ಮವನ್ನು ಜಾತಿ ಯೊಳಗೆ ನೊಕಿ
ಜಾತಿ-ಜಾತಿಯನ್ನೊಳಗೆ ನೊಕಿ
ಜಾತಿಯೊಳಗೆ ಮನಸ್ಸತ್ವವನ್ನು ನೊಕಿ
ತಾನು ತನ್ನದೇ ಮಿಗಲೆಂದು
ಹುಚ್ಚೆದ್ದಿರುವಾಗ ಮಾಧ್ಯಮಗಳು
ಪ್ರಚಾರಗಿಟ್ಟಿಸಿಕೊಳ್ಳಲು ಹಿಂದೆ ಸರಿಯುವುದುಂಟೆ.
ರಾಜಕೀಯ ಒಗ್ಗರಣೆ ಹಾಕದಿರುವುದುಂಟೆ.
ಅದು ಸರಿ ಇದು ತಪ್ಪು
ಇದು ಸತ್ಯ ಅದು ಸುಳ್ಳು
ಎಲ್ಲಾ ಅವರವರ ಮೂಗಿನ ನೇರಕ್ಕೆ
ಇದೆಷ್ಟು ದಿನ?
ಸಂಧಾನ ಮಾಡಲು ಮಾಯಾವಿಯೂ ಇಲ್ಲಾ
ಸಹಿಸಿಕೊಳ್ಳಲು ಧರ್ಮರಾಯನೂ ಇಲ್ಲಾ
ತ್ಯಾಗ ಮಾಡಲು ಕರ್ಣನೂ..ಇಲ್ಲಾ..
ಇದು ಕಲಿಗಾಲವಾದರೂ..
ವಿಶ್ವಜ್ಙಾನಿಯ ಲೆಕ್ಕಾಚಾರವೇ ಇಲ್ಲಿ.
ಸಮಾನತೆಯ ಜ್ಯೋತಿಯೂ ಬಿರುಗಾಳಿಯಲ್ಲಿಯೂ
ತಂಗಾಳಿಯಾಗುವುದು.
ನಿಂದಿಸದವರೆಲ್ಲಾ ದೊಡ್ಡವರಲ್ಲ
ಅಧಿಕಾರದ ದರ್ಪವಷ್ಟೇ.
ಹೆಣ್ಣು ರಾಷ್ಟ್ರಪತಿಯಾಗುವಂತಿಲ್ಲ
ಮುಸ್ಲಿಂ ಹೆಣ್ಣು ದಸರಾ ಉದ್ಘಾಟಿಸುವಂತಿಲ್ಲ
ಸೌಜನ್ಯಳಿಗೆ ನ್ಯಾಯ ಕೊಡಿಸುವರಿಲ್ಲ,
ಲಿಂಗತ್ವಕ್ಕೆ ಚೌಕಟ್ಟು ಕೊಟ್ಟಿರುವವರು
ಧರ್ಮದ ಗುಂಗಿನಲ್ಲಿರುವವರು
ಮದವೇರಿದ ಅಯ್ಯೋಗರು
ಇದು ನಿಮ್ಮ ಸಂಸ್ಕೃತಿನಾ?
ಇದೇ ನಿಮ್ಮ ಧರ್ಮ ನಾ?
ಮಾನವೀಯತೆವಿಲ್ಲದ ನಿಮ್ಮ ಧರ್ಮ ಸಂಸ್ಕೃತಿಯ
ಮೂಟೆ ಕಟ್ಟಿ ಮೂಲೆಯಲ್ಲಿ ಹಾಕಿ
ಮನುಷ್ಯ ಮನುಷ್ಯತ್ವ ತಿಳಿದು
ಬದುಕದಿದ್ದರೆ ಪಶುಗಿಂತಲೂ ಕಡೆ
ಬದಲಾವಣೆ ಜಗದ ನಿಯಮ ನೆನಪಿರಲಿ
ಅನುರಾಧ ಕೆ ಸಿಂಗಾನಲ್ಲೂರು
ಯುವ ಸಾಹಿತಿ ಮತ್ತು ಕನ್ನಡ ಸಹಾಯಕ ಪ್ರಾಧ್ಯಾಪಕರು