

ಹನೂರು : ಹನೂರು ಪಟ್ಟಣದ ವಿನಾಯಕ ನಗರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗೌರಿ ಗಣೇಶನನ್ನು ಅದ್ದೂರಿ ಮೆರವಣಿಗೆ ಮತ್ತು ವಾದ್ಯಮೇಳಗಳ ಝೇಂಕರದೊಂದಿಗೆಬ ಗುಂಡಾಲ್ ಜಲಾಶಯದಲ್ಲಿ ಗಣೇಶನ ವಿಸರ್ಜನೆ ಮಾಡಲಾಯಿತು.
ಹನೂರು ಪಟ್ಟಣದ ವಿನಾಯಕ ನಗರದ ಎರಡನೇ ಹಂತದ ಲೇಟ್ ಗೋವಿಂದ ನಾಯ್ಡು ಬಡಾವಣೆಯಲ್ಲಿ ಗೌರಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಕಳೆದ ಐದು ದಿನಗಳಿಂದ ಧಾರ್ಮಿಕವಾಗಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಭ್ರಮ ಸಡಗರದೊಂದಿಗೆ ಗೌರಿ ಗಣೇಶನನ್ನು ತಾಲೂಕಿನ ಗುಂಡಲ್ ಜಲಾಶಯದಲ್ಲಿ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ವಿಸರ್ಜನೆ ಮಾಡಲಾಯಿತು…
ಪ್ರಸಾದ ವಿನಿಯೋಗ : ಗೌರಿ ಗಣೇಶನನ್ನು ಗುಂಡಲ್ ಜಲಾಶಯದಲ್ಲಿ ವಿಸರ್ಜನೆ ಮಾಡಿ ನೆರೆದಿದ್ದ ಗಣೇಶನ ಭಕ್ತರಿಗೂ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು ಇದೇ ಸಂದರ್ಭದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. . . .
ವರದಿ : ನಿಂಪು ರಾಜೇಶ್.