

ಹನೂರು : ರಾಮನಗುಡ್ಡ ಕೆರೆ ಹಾಗೂ ಹುಬ್ಬೆ ಹುಣಸೆ ಕೆರೆ ಜಲಾಶಯಗಳನ್ನು ಅಭಿವೃದ್ಧಿಪಡಿಸಿ ನದಿಯಿಂದ ನೀರು ಹರಿಸಲು ಆಧುನಿಕ ಭಗಿರಥನಾಗಿ ಶಾಸಕ ಎಂಆರ್ ಮಂಜುನಾಥ್ ರೈತರಿಗೆ ಶಾಶ್ವತ ಪರಿಹಾರ ನೀಡಲು ಭರವಸೆ ಸಭೆಯ ನಡೆಸಿದರು.
ಹನೂರು ತಾಲೂಕಿನ ರಾಮನ ಗುಡ್ಡ ನೀರಾವರಿ ಯೋಜನೆ 397 ಎಕ್ಟರ್ ಪ್ರದೇಶಕ್ಕೆ 35 ಎಂ ಸಿ ಎಫ್ ಟಿ ನೀರು ಸಂಗ್ರಹ ಸಾಮರ್ಥ್ಯದ ರಾಮನಗುಡ್ಡ ಕೆರೆ ಅಭಿವೃದ್ಧಿಯ ಜೊತೆಗೆ ಒತ್ತುವರಿಯಾಗಿರುವ ಜಮೀನುಗಳನ್ನು ಸಹ ತೆರವುಗೊಳಿಸಿ, ರೈತರಿಗೆ ನೀರಾವರಿ ಯೋಜನೆ ನಿರಂತರ ಶಾಶ್ವತ ಯೋಜನೆಗೆ ಶಾಸಕ ಎಂಆರ್ ಮಂಜುನಾಥ್ ಆಧುನಿಕ ಭಗೀರಥ ನಾಗಿ ಹಗಲು ರಾತ್ರಿ ಎನ್ನದೆ ನೀರಾವರಿ ಯೋಜನೆಗಳ ಅಭಿವೃದ್ದಿಗೆ ಮುಂದಾಗಿದ್ದಾರೆ.
ಕ್ಷೇತ್ರದ ಜನತೆಯ ಹಿತದೃಷ್ಟಿಯಿಂದ ರಾಮನಗುಡ್ಡ ಕೆರೆಯಲ್ಲಿ ರೈತರ ಸಭೆಯ ಉದ್ದೇಶಿಸಿ ಮಾತನಾಡಿದ ಅವರು, ಪ್ರಮುಖ ಬಹು ನಿರೀಕ್ಷಿತ ಜಲಶಯಗಳಿಗೆ ನೀರಾವರಿ ಯೋಜನೆ ಕಲ್ಪಿಸುವ ಉದ್ದೇಶದಿಂದ ತಾಲೂಕಿನ ಗುಂಡಲ್ ಜಲಾಶಯಕ್ಕೆ ಈಗಾಗಲೇ ನೀರು ಹರಿಸಲಾಗುತ್ತಿದೆ ಬಹು ನಿರೀಕ್ಷಿತ ರಾಮನಗುಡ್ಡೆ ಕೆರೆ ಅಭಿವೃದ್ಧಿ ಜೊತೆಗೆ 1,4, ಕಿಲೋಮಿಟರ್ ಪೈಪ್ ಲೈನ್ ಕಾಮಗಾರಿ ಇರುವುದರಿಂದ ನೀರು ತುಂಬಿಸಲು ವಿಳಂಬವಾಗಿದೆ ಕಳೆದ ಒಂದು ತಿಂಗಳ ಹಿಂದೆ ರೈತರ ಹಾಗೂ ಅಧಿಕಾರಿಗಳ ಸಭೆ ನಡೆಸಲಾಗಿತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಭೇಟಿ ಮಾಡಿ ಇದಕ್ಕೆ ಪೂರಕವಾಗಿ ಬೇಕಾಗಿರುವ ಹೆಚ್ಚಿನ ಅನುದಾನವನ್ನು ನೀಡುವಂತೆ ಮನವಿ ಮಾಡಲಾಗಿತ್ತು.
ಮನವಿಗೆ ಸ್ಪಂದಿಸಿ ಮಳೆ ಇಲ್ಲದೆ ದಶಕಗಳಿಂದ ಕೆರೆ ಬರಿದಾಗಿರುವುದನ್ನು ಮನಗಂಡು ಶಾಶ್ವತ ನೀರಾವರಿ ಯೋಜನೆಗೆ 2.5 ಕೋಟಿ ಅನುದಾನ ನೀಡಿ ಟೆಂಡರ್ ಪಕ್ರಿಯೆ ಆಡಳಿತಾತ್ಮಕವಾಗಿ ಮುಗಿಸಿ ಟೆಂಡರ್ ಕರೆಯಲಾಗಿದೆ ಒಂದು ತಿಂಗಳೊಳಗೆ ಕಾಮಗಾರಿ ಮುಗಿದು ನೀರಾವರಿಯನ್ನು ಕಾವೇರಿ ನದಿಯಿಂದ ಹರಿಸಲು ಈಗಾಗಲೇ ಪರಿಶ್ರಮದೊಂದಿಗೆ ರೈತರ ಹಿತದೃಷ್ಟಿಯಿಂದ ಮತ್ತು ನೀರಾವರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಸದುದ್ದೇಶದಿಂದ ರೈತರಿಗೆ ಕೊಟ್ಟ ಮಾತಿನಂತೆ ಈ ಯೋಜನೆಗೆ ಸಮವಹಿಸಲಾಗಿದೆ ಎಂದರು.
ಚಾಮರಾಜನಗರ ಜಿಲ್ಲೆಯ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ 52 ಕೋಟಿ ಅನುದಾನ ಘೋಷಣೆ ಮಾಡಿದೆ. ಆದರೆ ಹಣಕಾಸು ಇಲಾಖೆಯಿಂದ ಇನ್ನಷ್ಟು ಪ್ರಕ್ರಿಯೆ ಪೂರ್ಣಗೊಳ್ಳದೆ ಇರುವುದರಿಂದ ಅನುದಾನ ಬರಲು ಇನ್ನೂ ಸಮಯ ಅವಕಾಶ ಬೇಕಾಗಿರುವುದರಿಂದ 14.5 ಕೋಟಿ ಹಣವನ್ನು ವಿವಿಧ ಜಲಾಶಯಗಳ ರಾಡಿಯನ್ನು ತೆಗೆಯಲು ಹಣವನ್ನು ಮೀಸಲಿಟ್ಟಿದೆ.
ಅಲ್ಲಿಯವರೆಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸಿದರೆ ಹೆಚ್ಚಿನ ನೀರು ಸಂಗ್ರಹಣೆಯಾಗುವುದಿಲ್ಲ ಹೀಗಾಗಿ ಈ ನಿಟ್ಟಿನಲ್ಲಿ ರಾಮನಗುಡ್ಡ ಜಲಾಶಯದ ಊಳು ತೆಗೆಯಲು ರೈತರು ಮುಂದೆ ಬಂದರೆ ಅಂತಹವರಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಜೊತೆಗೆ ಕೆರೆ ಅಭಿವೃದ್ಧಿಗೂ ಒತ್ತು ನೀಡಲಾಗುತ್ತದೆ ಎಂದು ತಿಳಿಸಿದರು.
ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ : ಕಳೆದ 20 ವರ್ಷಗಳಿಂದ ಅಭಿವೃದ್ಧಿಯಾಗದ ರಸ್ತೆಗಳನ್ನು ತಾಲೂಕಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಮಲೆ ಮಹದೇಶ್ವರ ಬೆಟ್ಟ ಹಾಗೂ ಕೊಳ್ಳೇಗಾಲ ಉಪ ವಿಭಾಗ ವ್ಯಾಪ್ತಿಯ ಗ್ರಾಮಾಂತರ ರಸ್ತೆಗಳನ್ನು ಬಿಟ್ಟು ಮುಖ್ಯರಸ್ತೆಗಳನ್ನು ಅಭಿವೃದ್ಧಿ ಮಾಡಲು 400 ಕೋಟಿ ಅನುದಾನ ಬೇಕಾಗಿದೆ ಸರ್ಕಾರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ ಅನುದಾನ ಬಿಡುಗಡೆಯಾದ ನಂತರ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಹೊತ್ತು ನೀಡಲಾಗುವುದು ಎಂದರು.
ಹನೂರು ಪಟ್ಟಣದಿಂದ ಬಂಡಳ್ಳಿ ಗ್ರಾಮದವರೆಗೆ 25 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಹೀಗಾಗಿ ಮುಂದಿನ ದಿನಗಳಲ್ಲಿ ಬಂಡಳ್ಳಿ ಗ್ರಾಮದಿಂದ ಶಾಗ್ಯ ಗ್ರಾಮದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು..
ಆಧುನಿಕ ಭಗಿರಥನಾದ ಶಾಸಕ : ಕ್ಷೇತ್ರದ ಉದ್ದಕ್ಕೂ ಮಳೆ ಇಲ್ಲದೆ ಈ ಸಾಲಿನಲ್ಲಿ ಬರಿದಾಗಿರುವ ಕೆರೆಕಟ್ಟೆ, ಹಳ್ಳಕೊಳ್ಳೆಗಳನ್ನು ಅಭಿವೃದ್ಧಿಪಡಿಸಲು ಶಾಸಕ ಎಂಆರ್ ಮಂಜುನಾಥ್ ತಾಲೂಕಿನ ಹುಬ್ಬೆ ಹುಣಸೆ ಜಲಾಶಯದ ಒತ್ತುವರಿಯಾಗಿದ್ದ ಜಮೀನನ್ನು ಈಗಾಗಲೇ ಕಳೆದ ಒಂದು ವಾರದಿಂದ ನಿರಂತರವಾಗಿ ತೆರವುಗೊಳಿಸಲಾಗುತ್ತಿದೆ ಹೀಗಾಗಿ ಮಳೆಗಾಲದಲ್ಲಿ ನೀರು ತುಂಬಿ ಅಪಾರ ಪ್ರಮಾಣ ನೀರು ತಮಿಳುನಾಡಿನ ಪಾಲಾಗುತ್ತಿತ್ತು ಹೀಗಾಗಿ ರೈತರ ಕೃಷಿ ಚಟುವಟಿಕೆ ಸೇರಿದಂತೆ ಹನೂರು ಪಟ್ಟಣಕ್ಕೂ ಶಾಶ್ವತ ಕುಡಿಯುವ ನೀರಿನ ಯೋಜನೆ ಸದ್ಬಳಕೆ ಮಾಡಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳಿಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರು ನಿರಂತರವಾಗಿ ನೀರಾವರಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಹೆಚ್ಚಿನ ಒತ್ತು ನೀಡಿದ್ದಾರೆ.
ಬಹು ನಿರೀಕ್ಷಿತ ರಾಮನಗುಡ್ಡ ಕೆರೆ ಅಭಿವೃದ್ಧಿಗೆ ಶಾಸಕರ ಓತ್ತು : ಕಳೆದ ದಶಕಗಳಿಂದ ರಾಮನ ಗುಡ್ಡ ಕೆರೆ ಅಭಿವೃದ್ಧಿಪಡಿಸಿ ನೀರಾವರಿ ಯೋಜನೆಗೆ ಒತ್ತು ನೀಡದೆ ಇರುವುದರಿಂದ ಈ ಭಾಗದಲ್ಲಿ ರೈತರಿಗೆ ಜನಜಾನುವಾರುಗಳಿಗೆ ನೀರಾವರಿ ಯೋಜನೆ ಕಲ್ಪಿಸುವಂತೆ ಕ್ಷೇತ್ರದ ಜನತೆಯ ಆಶಯದಂತೆ ಕಾವೇರಿ ನದಿಯಿಂದ ರಾಮನಗುಡ್ಡೆ ಕೆರೆಗೆ ನೀರಾವರಿ ಯೋಜನೆಯನ್ನು ಕಲ್ಪಿಸುವ ಸದುದ್ದೇಶದಿಂದ ಶಾಸಕರು ರಾಮನಗುಡ್ಡ ಕೆರೆಗೆ ಇಪ್ಪತ್ತಕ್ಕೂ ಹೆಚ್ಚು ಬಾರಿ ಅಧಿಕಾರಿ ಮತ್ತು ರೈತರ ಜೊತೆ ಭೇಟಿ ನೀಡಿ ಪರಿಶೀಲಿಸಿ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ಸದುದ್ದೇಶದಿಂದ ಭಾನುವಾರ ರೈತರ ಸಭೆಯ ಕರೆದು ಒಂದು ತಿಂಗಳ ಒಳಗೆ ನೀರಾವರಿ ಯೋಜನೆಯನ್ನು ಕಲ್ಪಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧ ರೈತ ಸಂಘಟನೆ ಮುಖಂಡರು ಹಾಗೂ ರಾಮನ ಗುಡ್ಡ ಕೆರೆ ಸುತ್ತಮುತ್ತಲಿನ ರೈತ ಮುಖಂಡರು ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನಿವಾಸಿಗಳು ಉಪಸಿತರಿದ್ದರು.
ವರದಿ : ನಿಂಪು ರಾಜೇಶ್