/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಕೊಳ್ಳೇಗಾಲ : ತಾಲೂಕು ಕ್ರೈಸ್ತ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಅಂತೋಣಿ ದಿನೇಶ್ ಎರಡನೇ ಅವದಿಗೆ ಪುನಾರಾಯ್ಕೆ
Image

ಕೊಳ್ಳೇಗಾಲ : ತಾಲೂಕು ಕ್ರೈಸ್ತ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಅಂತೋಣಿ ದಿನೇಶ್ ಎರಡನೇ ಅವದಿಗೆ ಪುನಾರಾಯ್ಕೆ

ಕೊಳ್ಳೇಗಾಲ. ತಾಲ್ಲೂಕು ಕ್ರೈಸ್ತ ಒಕ್ಕೂಟದ ಅಧ್ಯಕ್ಷರಾಗಿ ಅಂತೋಣಿ ದಿನೇಶ್ ಅವರು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.

ಪಟ್ಟಣದ ಸಂತ ಫ್ರಾನ್ಸಿಸ್ ಅಸಿಸ್ಸಿ ಸಭಾಂಗಣ ದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಿರಣ್ ಕುಮಾರ್(34) ವಿರುದ್ಧ ಅಂತೋಣಿ ದಿನೇಶ್(56) ಮತ ಪಡೆದು ಜಯಗಳಿಸಿದರು.
ಒಕ್ಕೂಟದ ಕಾರ್ಯದರ್ಶಿ ಸಿ.ನಾಗರಾಜು, ಹಾಗೂ ಖಜಾಂಜಿ ಅಮರೇಶ್ ಕುಮಾರ್ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಜೆ.ಉದಯಕುಮಾರ್ ಅವರು ಘೋಷಣೆ ಮಾಡಿದರು.
ಒಕ್ಕೂಟದ ಅಧ್ಯಕ್ಷರು ಅಂತೋಣಿ ದಿನೇಶ್ ಮಾತನಾಡಿ, ತಾಲ್ಲೂಕು ಕ್ರೈಸ್ತ ಒಕ್ಕೂಟ ಅಧ್ಯಕ್ಷರ ನ್ನಾಗಿ ನನ್ನನ್ನು ಮತ್ತೆ ಆಯ್ಕೆ ಮಾಡಿದ್ದ ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾನು ಒಕ್ಕೂಟದ ಅಭಿವೃದ್ಧಿಗೆ ಎಲ್ಲರಾ ಸಹಕಾರದೊಂದಿಗೆ ಶ್ರಮಿಸುವ ಭರವಸೆ ನೀಡಿದರು.

ಇದಕ್ಕೂ ಮುನ್ನ ನಡೆದ 2024-25 ನೇ ಸಾಲಿನ ಸಭೆಯಲ್ಲಿ 1.55 ಲಕ್ಷ ಆದಾಯವನ್ನು ಮಂಡಿಸಿದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ 12 ಮಕ್ಕಳಿಗೆ ಪುರಸ್ಕರಿಸಿದರು.

ಈ ಸಂಧರ್ಭದಲ್ಲಿ ಮಿಲ್ಟನ್ ಕ್ರಿಸ್ಟಪರ್, ಜೆ‌ಎಂ ಕಿರಣ್ ಕುಮಾರ್, ಹೆಚ್ ನಾಗರಾಜು, ಡೇವಿಡ್, ರಾಯಪ್ಪ, ಉದಯನಂದ ಪ್ರಸಾದ್, ವಿನೋದ್ ಕುಮಾರ್, ಸತ್ಯಪಾಲ್ ಹಾಗೂ ಸದಸ್ಯರು ಹಾಜರಿದ್ದರು.

ವರದಿ : ನಿಂಪು ರಾಜೇಶ್

Releated Posts

ಕೊಳ್ಳೇಗಾಲ: ಪೌರಕಾರ್ಮಿಕರಿಗೆ ಊಟ ಬಡಿಸಿದ ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ಸಮಾಜದಲ್ಲಿ ಕೊಳಕು ಮುಕ್ತ ಪ್ರದೇಶವಾಗಲು ಪೌರಕಾರ್ಮಿಕರು ಮುಖ್ಯ ಕಾರಣವಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಹೇಳಿದರು. ಪಟ್ಟಣದ ಸಿಡಿಎಸ್ ಭವನದಲ್ಲಿ ಬುಧವಾರ ಪೌರ…

ByByN Rajesh Feb 11, 2026

ಕೊಳ್ಳೇಗಾಲ ನಗರಸಭೆ – ಜಿಲ್ಲಾಧಿಕಾರಿ ಶ್ರೀ ರೂಪ ಅವರಿಂದ ಉಳಿತಾಯ ಬಜೆಟ್ ಮಂಡನೆ

ಕೊಳ್ಳೇಗಾಲ ನಗರಸಭೆಯ ೨೦೨೬-೨೭ನೇ ಸಾಲಿನ ಬಜೆಟ್‌ನ ಪಕ್ಷಿ ನೋಟ ಕೊಳ್ಳೇಗಾಲ, ಫೆ, ೧೦- ಕೊಳ್ಳೇಗಾಲ ನಗರಸಭೆಯ ಸಭಾಂಗಣದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ಫೆ.೧೦…

ByByN Rajesh Feb 10, 2026

ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರ ಅಯ್ಕೆ

ಕೊಳ್ಳೇಗಾಲ. ಸತ್ತೇಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಗ್ರಾಮದಲ್ಲಿ ನಡೆದ ಚುನಾವಣೆಯಲ್ಲಿ 8…

ByByN Rajesh Feb 9, 2026

ಕೊಳ್ಳೇಗಾಲ : ಗ್ಯಾರೆಂಟಿ ಯೋಜನೆಗಳಿಂದ ನವ ಕರ್ನಾಟಕ ನಿರ್ಮಾಣ – ಶಾಸಕ ಎ.ಆರ್.ಕೃಷ್ಣಮೂರ್ತಿ

ಸರ್ಕಾರದ ಅಭಿವೃದ್ಧಿ ಯೋಜನೆ, ಕಾರ್ಯಕ್ರಮಗಳು ನವಕರ್ನಾಟಕ ನಿರ್ಮಾಣಕ್ಕೆ ಸಹಕಾರಿ: ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಕೊಳ್ಳೇಗಾಲ. ರಾಜ್ಯಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಅಭಿವೃದ್ಧಿಗಾಗಿ…

ByByN Rajesh Jan 17, 2026

Leave a Reply

Your email address will not be published. Required fields are marked *

Scroll to Top