
ಹನೂರು : ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮ ಅರಣ್ಯ ಪ್ರದೇಶಕ್ಕೆ ಸೇರಿದ ಬಿಜಿ ಪಾಳ್ಯ ವಲಯದ ಚಿತ್ರಂಗಶೆಟ್ಟಿ ಗ್ರಾಮದ ಬಳಿ ಮುಖ್ಯರಸ್ತೆಯಲ್ಲಿಯೇ ಹುಲಿಯ ಹೆಜ್ಜೆ ಗುರುತು ಪತ್ತೆ ಸ್ಥಳೀಯರಿಗೆ ಆತಂಕ ಮೂಡಿಸಿದೆ
ದೇವಾಲಯದ ಬಳಿ ಹೆಜ್ಜೆ ಗುರುತು ಪತ್ತೆಯಾಗಿರುವುದರಿಂದ ಸ್ಥಳೀಯ ಗ್ರಾಮಸ್ಥರು ಹಾಗೂ ರೈತರು ಭಯದ ವಾತಾವರಣದಲ್ಲಿ ಜಮೀನಿಗೆ ಕಾವಲು ಕಾಯಲು ಹೋಗಲು ರೈತರು ಹಿಂದೇಟು ಹಾಕುತ್ತಿದ್ದಾರೆ ಹೀಗಾಗಿ ಅರಣ್ಯದಂಚಿನ ಗ್ರಾಮ ಹಾಗಿರುವುದರಿಂದ ಗ್ರಾಮದ ನಿವಾಸಿಗಳು ಸಹ ಭಯದ ವಾತಾವರಣದ ಜೊತೆಗೆ ಕ್ರೂರ ಪ್ರಾಣಿಯಾಗಿರುವ ಹುಲಿ ಹೆಜ್ಜೆ ಗುರುತು ಪತ್ತೆಯಾಗಿರುವುದನ್ನು ವಿಚಾರ ಒಬ್ಬರಿಂದ ಒಬ್ಬರಿಗೆ ತಿಳಿದು ಕಾಡುಗಿಚ್ಚಿನಂತೆ ಹರಡಿ ಇಡೀ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದೆ…
ಹುಲಿ ಸಂಚಾರವನ್ನು ತಪ್ಪಿಸಲು ರೈತರ ಆಗ್ರಹ : ಮಲೆ ಮಾದೇಶ್ವರ ವನ್ಯಜೀವಿ ಧಾಮದ ವಲಯ ಅರಣ್ಯ ಪ್ರದೇಶದ ಚಿಕ್ಕರಂಗಶೆಟ್ಟಿ ಗ್ರಾಮದ ಬಳಿ ಹುಲಿಯ ಹೆಜ್ಜೆ ಗುರುತು ಕಂಡು ಪ್ರಯಾಣಿಕರು ಹಾಗೂ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದು ಅರಣ್ಯ ಅಧಿಕಾರಿಗಳು ಹುಲಿ ಗ್ರಾಮದ ಬಳಿಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಜೊತೆಗೆ ಅರಣ್ಯದಂಚಿನ ರೈತರ ಜಮೀನುಗಳ ಬಳಿಯೇ ಸೋಲಾರ್ ಬೇಲಿ ಹಾಗೂ ಕಂದಕ ನಿರ್ಮಾಣ ಮಾಡುವ ಮೂಲಕ ಹುಲಿ ಗ್ರಾಮದ ಬಳಿ ಬರುವುದನ್ನು ತಪ್ಪಿಸಲು ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಕ್ರೂರ ಪ್ರಾಣಿಯಾಗಿರುವುದರಿಂದ ಅರಣ್ಯದಂಚಿನ ರೈತರು ವಯಸ್ಸಾದವರು ಮಕ್ಕಳು ಹೆಚ್ಚಾಗಿರುವುದರಿಂದ ಈ ಭಾಗದಲ್ಲಿ ಮತ್ತು ದಿನನಿತ್ಯ ನೂರಾರು ವಾಹನಗಳು ಸಂಚರಿಸುವುದರಿಂದ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ರಕ್ಷಣೆ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಹಾಗೂ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ….