ಕೊಳ್ಳೇಗಾಲ. ಉಪವಿಭಾಗ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಆಶ್ರಯದಲ್ಲಿ ಲೈನ್ ಮ್ಯಾನ್ ದಿವಸವನ್ನು ಆಚರಣೆ ಮಾಡಿದರು.
ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ಇಂದು ನಡೆದ ಕಾರ್ಯಕ್ರಮವನ್ನು ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ತಬಸ್ಸುಮ್ ಅಸ್ಜಾ ಅವರು ಉದ್ಘಾಟನೆ ಮಾಡಿ ಮಾತನಾಡಿ, ಲೈನ್ ಮ್ಯಾನ್ ಜೀವ ಅಮೂಲ್ಯವಾದದ್ದು ಹಾಗಾಗಿ ಎಲ್ಲಾ ನೌಕರರು ಸಹಾ ಸಾಕಷ್ಟು ಸುರಕ್ಷತೆ ಹೊಂದುವ ಮೂಲಕ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಲೈನ್ ಮಾನ್ ಗಳು ಒತ್ತಡದ ನಡುವೆಯೂ ಜೀವ ಒತ್ತೆ ಇಟ್ಟು ಕಾರ್ಯನಿರ್ವಹಿಸುತ್ತ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿರುವುದು ಶ್ಲಾಘನಿಯವಾದದ್ದು. ನೌಕರರಿಂದ ಸಾರ್ವಜನಿಕರು ಅಧಿಕಾರಿಗಳನ್ನು ಗುರುತಿಸುತ್ತಿರುವುದು ನಮ್ಮಗೆ ಹೆಮ್ಮೆ ತರುವಂತಾಗಿದೆ. ವಿದ್ಯುತ್ ಇಲಾಖೆ ಒಂದು ಕುಟುಂಬ ಎಲ್ಲಾರು ಬಗ್ಗಟಿನಿಂದ ಕೆಲಸ ನಿರ್ವಿಹಿಸಿಬೇಕಿದೆ. ಎಲ್ಲಾ ಅಧಿಕಾರಿಗಳು ನಿಮ್ಮ ಜೊತೆ ಸದಾ ಇರುತ್ತವೆ. ನಿಮ್ಮ ಕಷ್ಟಗಳಲ್ಲಿ ಭಾಗಿಯಾಲಿದ್ದೇವೆ. ಏನೇ ಸಮಸ್ಯೆಯಿದ್ದರು ಮುಕ್ತವಾಗಿ ಹೇಳಿಕೊಂಡು ನಿರ್ಭಿತಿಯಿಂದ ಕೆಲಸ ನಿರ್ವಹಿಸಬೇಕಿದೆ ಎಂದರು.
ಬಳಿಕ ಉಪವಿಭಾಗದ ಕೊಳ್ಳೇಗಾಲ, ಹನೂರು, ಯಳಂದೂರು ವ್ಯಾಪ್ತಿಯ ಎಲ್ಲಾ ಶಾಖೆಗಳಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುವ ತಲಾ ಓರ್ವ ನೌಕರರಿಗೆ ವಿಭಾಗಮಟ್ಟದ ವತಿಯಿಂದ ಪ್ರಶಸ್ತಿ ನೀಡಿದರು.
ಕಾರ್ಯಕ್ರಮದಲ್ಲಿ ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರರು ರಾಜು.ಎಂ, ಹನೂರು ಎಇಇ ರಂಗಸ್ವಾಮಿ, ಯಳಂದೂರು ಎಇಇ ಲಿಂಗರಾಜು, ಉಪವಿಭಾಗ ಎಇಇ ಸಂತೋಷ್, ಲೆಕ್ಕಾಧಿಕಾರಿಗಳಾದ ವಿನೋದ್, ಪ್ರಸನ್ನ, ಅಗ್ನಿಶಾಮಕ ದಳದ ಠಾಣಾಧಿಕಾರಿ ಸಿದ್ದಾರ್ಥ್.ಎಂ, ಕೇಂದ್ರ ಕಾರ್ಯಕಾರಿಣಿ ಸದಸ್ಯರು ಮಹದೇವ ಹಾಗೂ 659 ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಇತರರು ಇದ್ದರು.
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.