
ಕೊಳ್ಳೇಗಾಲ: ಕರ್ನಾಟಕ ರಾಜ್ಯ ರೈತ ಸಂಘ ಜಾಗೇರಿ ಘಟಕ ವತಿಯಿಂದ ನಾಗರಿಕರ ಮುಲಭೂತ ಹಕ್ಕು ಕಸಿದುಕೊಂಡು ಅರಣ್ಯ ಇಲಾಖೆಯ ಜನವಿರೋಧಿ ನೀತಿ ಖಂಡಿಸಿ ಸತ್ತೇಗಾಲ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನಾ ಚಳುವಳಿ ಹಮ್ಮಿಕೊಂಡಿದ್ದರು.
ತಾಲ್ಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ನಲ್ಲಿ ಜಮಾಯಿಸಿದ್ದ ನೂರಾರು ರೈತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಸತ್ತೇಗಾಲ ಗ್ರಾ.ಪಂ ಪಾದಯಾತ್ರೆ ಮೂಲಕ ಪ್ರತಿಭಟಿಸಿದರು.
ಈ ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ರೈತ ಮುಖಂಡರು ಬಸವರಾಜು, ಉಪಾಧ್ಯಕ್ಷರು ಚಾರ್ಲಿ, ಲಿಂಗರಾಜು, ವಸಂತಕುಮಾರ್, ಗ್ರಾಮಘಠಕ ಕಚೇರಿ ಮಹದೇವ, ಲಾರೆನ್ಸ್, ಮಾರ್ಟಳ್ಳಿ ಅರಪುದರಾಜ್
ಮಹಿಳಾ ಜಿಲ್ಲಾ ಅಧ್ಯಕ್ಷ ಮಾದಮ್ಮ, ಜಾನ್ ಕೆನಾಡಿ, ಪೆರಿಯಾನಾಯಗಂ, ಭಾಸ್ಕರ್,
ಜಾಗೇರಿ ಸದಸ್ಯ ಮುರುಗೇಶ್, ಅರೋಗ್ಯ, ಭೈರ, ಕೆಂಪರಾಜು, ವಿಜಿ, ಶಿವಮಲ್ಲಿ, ಶಾಂತಮೇರಿ, ವಸಂತಮೇರಿ
ಸ್ಥಳಕ್ಕೆ ತಹಶಿಲ್ದಾರ್ ಬಸವರಾಜು, ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಎಸಿಎಫ್ ಶಿವರಾಮು, ಆರ್.ಎಫ್.ಒ ರವಿಕುಮಾರ್ ಪುರಾಣಿಕಮಠ ಇದ್ದರು
ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಶಿವಮಾದಯ್ಯ ಭದ್ರತೆ ಒದಗಿಸಿದರು.