/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಕೊಳ್ಳೇಗಾಲ ನಗರಸಭೆ – ಜಿಲ್ಲಾಧಿಕಾರಿ ಶ್ರೀ ರೂಪ ಅವರಿಂದ ಉಳಿತಾಯ ಬಜೆಟ್ ಮಂಡನೆ
Image

ಕೊಳ್ಳೇಗಾಲ ನಗರಸಭೆ – ಜಿಲ್ಲಾಧಿಕಾರಿ ಶ್ರೀ ರೂಪ ಅವರಿಂದ ಉಳಿತಾಯ ಬಜೆಟ್ ಮಂಡನೆ

ಕೊಳ್ಳೇಗಾಲ ನಗರಸಭೆಯ ೨೦೨೬-೨೭ನೇ ಸಾಲಿನ ಬಜೆಟ್‌ನ ಪಕ್ಷಿ ನೋಟ

ಕೊಳ್ಳೇಗಾಲ, ಫೆ, ೧೦- ಕೊಳ್ಳೇಗಾಲ ನಗರಸಭೆಯ ಸಭಾಂಗಣದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ಫೆ.೧೦ ರಂದು ನಡೆದ ಬಜೆಟ್ ಸಭೆಯಲ್ಲಿ ನಗರಸಭೆಯ ಆಡಳಿತಾಧಿಕಾರಿ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿ ಆದ ಶ್ರೀರೂಪ ಅವರು ೨೦೨೬-೨೭ನೇ ಸಾಲಿನ ಬಜೆಟ್‌ಅನ್ನು ಮಂಡನೆ ಮಾಡಿದರು. ಅವರು ಪ್ರಸಕ್ತಸಾಲಿನ ಬಜೆಟ್‌ನಲ್ಲಿ ೧,೫೦,೮೮,೨೮೫ ರೂ. ಉಳಿತಾಯವನ್ನು ತೋರಿಸಿದ್ದಾರೆ. ಬಜೆಟ್‌ನ ಆರಂಬಿಕü ಶುಲ್ಕ ೧೪,೫೨,೮೫೮೭೯ ರೂ.ಗಳು, ಜಮೆಗಳು ೩೭.೮೩.೯೩೦೦೦ ರೂ.ಗಳು ಒಟ್ಟು ೫೨,೩೬,೭೮,೮೭೯ ರೂ.ಗಳೆಂದು ಬಜೆಟ್‌ನಲ್ಲಿ ಮಂಡನೆ ಮಾಡಿದ್ದಾರೆ.
ನಗರಸಭೆಗೆ ಸ್ವಂತ ಮೂಲಗಳಿಂದ ೧೨,೯೯,೯೩,೦೦೦ ರೂ.ಗಳು ಹಾಗೂ ರಾಜ್ಯ ಮತ್ತು ಕೇಂದ್ರಸರ್ಕಾರಗಳಿAದ ೨೪,೮೪,೦೦,೦೦೦ ರೂ.ಗಳ ಆದಾಯವನ್ನು ನಗರಸಭೆಯು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಈ ಆದಾಯದಲ್ಲಿ ಸುಮಾರು ೫೦,೮೫,೯೦,೫೯೪ ರೂ.ಗಳನ್ನು ನಗರಸಭೆಯ ವಿವಿಧ ಕಾಮಗಾರಿಗಳಿಗೆ ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. ಈ ಬಜೆಟ್‌ನಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವಿವಿಧ ಕಾರ್ಯಕ್ರಮಗಳು ಈ ಕೆಳಕಂಡAತಿವೆ.
೧) ಕೊಳ್ಳೇಗಾಲದ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಲು ಹಾಗೂ ಉದ್ಯಾನವನದಲ್ಲಿ ಅಲಂಕಾರಿಕ ದೀಪಗಳನ್ನು, ಜಿಮ್ ಮತ್ತು ವ್ಯಾಯಾಮ ಪರಿಕರಗಳನ್ನು ಅಳವಡಿಸಲು ರೂ.೨೦ ಲಕ್ಷ ರೂ.ಗಳನ್ನು ನಿಗಧಿಪಡಿಸಲಾಗಿದೆ.
೨) ತ್ಯಾಜ್ಯ ನಿರ್ವಹಣೆಗೆ, ಕಸ ವಿಲೇವಾರಿ ಷೆಡ್, ಸರ್ವೀಸ್ ಸ್ಟೇಷನ್, ವಾಹನ ಹಾಗೂ ಯಂತ್ರೋಪಕರಣ ಖರೀದಿಸಲು ೪೨೦ ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ.
೩) ೨೦೨೬-೨೭ ನೇ ಸಾಲಿನ ಆರ್ಥಿಕ ವರ್ಷದಲ್ಲಿ ಶೇ. ೨೪.೧೦ ರ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳÀ ಫಲಾನುಭವಿಗಳಿಗೆ ಸಹಾಯ ಧನ ನೀಡುವ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಾರ್ಡ್ಗಳ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಎಸ್.ಎಫ್.ಸಿ. ಮುಕ್ತನಿಧಿಯಿಂದ ೬೫ ಲಕ್ಷ ರೂ.ಗಳನ್ನು ನಿಗಧಿಪಡಿಸಲು ಉದ್ದೇಶಿಸಲಾಗಿದೆ.
೪) ನಗರಸಭೆ ವ್ಯಾಪ್ತಿಯಲ್ಲಿ ಸುಸಜ್ಜಿತ ವಿದ್ಯುತ್ ಚಿತಾಗಾರ ನಿರ್ಮಿಸಲು ವಿಶೇಷ ಅನುದಾನದಿಂದ ೫೦ ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ.
ಈ ಸಭೆಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ, ನಗರಸಭೆಯ ಪೌರಾಯುಕ್ತೆ ರತ್ನಮ್ಮ ಶರಣಯ್ಯ, ಉಪವಿಭಾಗಾಧಿಕಾರಿ ದಿನೇಶ್‌ಕುಮಾರ್ ಮೀನಾ, ತಹಶೀಲ್ದಾರ್ ಬಸವರಾಜು, ನಗರಸಭೆಯ ಎ.ಇ.ಇ. ಸಿ.ಎಂ.ನಟರಾಜು, ಆರೋಗ್ಯ ನಿರೀಕ್ಷಕ ಚೇತನ್, ಜೆ.ಇ. ನಾಗೇಂದ್ರ ಹಾಗೂ ನಗರಸಭೆಯ ಸಿಬ್ಬಂದಿ ವರ್ಗ ಹಾಜರಿದ್ದರು.

ವರದಿ- ನಿಂಪು ಸುರೇಶ್

Releated Posts

ಕೊಳ್ಳೇಗಾಲ: ಪೌರಕಾರ್ಮಿಕರಿಗೆ ಊಟ ಬಡಿಸಿದ ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ಸಮಾಜದಲ್ಲಿ ಕೊಳಕು ಮುಕ್ತ ಪ್ರದೇಶವಾಗಲು ಪೌರಕಾರ್ಮಿಕರು ಮುಖ್ಯ ಕಾರಣವಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಹೇಳಿದರು. ಪಟ್ಟಣದ ಸಿಡಿಎಸ್ ಭವನದಲ್ಲಿ ಬುಧವಾರ ಪೌರ…

ByByN Rajesh Feb 11, 2026

ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರ ಅಯ್ಕೆ

ಕೊಳ್ಳೇಗಾಲ. ಸತ್ತೇಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಗ್ರಾಮದಲ್ಲಿ ನಡೆದ ಚುನಾವಣೆಯಲ್ಲಿ 8…

ByByN Rajesh Feb 9, 2026

ಕೊಳ್ಳೇಗಾಲ : ಗ್ಯಾರೆಂಟಿ ಯೋಜನೆಗಳಿಂದ ನವ ಕರ್ನಾಟಕ ನಿರ್ಮಾಣ – ಶಾಸಕ ಎ.ಆರ್.ಕೃಷ್ಣಮೂರ್ತಿ

ಸರ್ಕಾರದ ಅಭಿವೃದ್ಧಿ ಯೋಜನೆ, ಕಾರ್ಯಕ್ರಮಗಳು ನವಕರ್ನಾಟಕ ನಿರ್ಮಾಣಕ್ಕೆ ಸಹಕಾರಿ: ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಕೊಳ್ಳೇಗಾಲ. ರಾಜ್ಯಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಅಭಿವೃದ್ಧಿಗಾಗಿ…

ByByN Rajesh Jan 17, 2026

ಬಿಳಿಗಿರಿರಂಗನ ಬೆಟ್ಟ: ಅಗ್ನಿ ದುರಂತದಲ್ಲಿ ಅಂಗಡಿ ಕಳೆದು ಕೊಂಡವರಿಗೆ ಹೊಸದಾಗಿ ಅಂಗಡಿ ನಿರ್ಮಾಣ

ಬೆಂಕಿ ಅನಾಹುತ ನಿರಾಶ್ರಿತರಿಗೆ ಮಳಿಗೆ ನಿರ್ಮಾಣದ ಭರವಸೆ ಶಾಸಕ ಎಆರ್ ಕೃಷ್ಣಮೂರ್ತಿ ಯಳಂದೂರು ಜ. 12ಬಿಳಿಗಿರಿರಂಗನ ಬೆಟ್ಟದ ಬಸ್ ನಿಲ್ದಾಣದ ಬಳಿ ಅಂಗಡಿ ಮಳಿಗೆಗಳಿಗೆ…

ByByN Rajesh Jan 13, 2026

Leave a Reply

Your email address will not be published. Required fields are marked *

Scroll to Top